March 27, 2026
Friday, March 27, 2026
spot_img

ದಿನಭವಿಷ್ಯ: ಸನ್ನಿವೇಶಗಳು ಸ್ವಲ್ಪ ಉಲ್ಟಾ ಹೊಡೆಯಬಹುದು, ಆದ್ರೆ ಪಾಸಿಟಿವ್ ಆಗಿರಿ

ಮೇಷ
ಹೇಳಬೇಕಾದುದನ್ನು  ಸರಿಯಾಗಿ ಹೇಳಿ. ಕೆಲವರಿಗೆ ಅದು ಅರ್ಥ ಆಗದಿರಬಹುದು. ಆರೋಗ್ಯ ಸಂಬಂಽ ಚಿಂತೆ. ಧನವ್ಯಯ.  
ವೃಷಭ
ಬಿಡುವಿರದ ದಿನ. ಕೆಲಸವನ್ನು ಆನಂದಿಸಿ. ಅದರಿಂದ ಒತ್ತಡ ಕಡಿಮೆ ಆದೀತು. ಆಪ್ತರ ಜತೆಗಿನ ಮಾತುಕತೆಯಿಂದ ಮನಸೋಲ್ಲಾಸ.      
ಮಿಥುನ
ಮನೆಯಲ್ಲಿ ನಿಮ್ಮ ನಿಲುವಿಗೇ ಅಂಟಿಕೊಂಡು ಸೌಹಾರ್ದ ಕೆಡಿಸದಿರಿ. ಕ್ಲಿಷ್ಟ ಪರಿಸ್ಥಿತಿ ಎದುರಾದೀತು. ಹೊಂದಾಣಿಕೆ ಸ್ವಭಾವ ಬೆಳೆಸಿಕೊಳ್ಳಿ.
ಕಟಕ
ನಿಮ್ಮ ವ್ಯವಹಾರ ಉತ್ತಮಪಡಿಸಲು ಹೊಸ ಚಿಂತನೆ ರೂಪಿಸಿ. ಕಡಿಮೆ ಖರೀದಿಯಿಂದ ಹಣ ಉಳಿಸಬಹುದು. ಮೈ ನೋವು ಬಾಽಸಬಹುದು.  
ಸಿಂಹ
ಪ್ರತಿಕೂಲ ಸನ್ನಿವೇಶ ಎದುರಿಸುವಿರಿ. ಆದರೆ ಪಾಸಿಟಿವ್ ಚಿಂತನೆ ಬಿಡದಿರಿ. ಮನೆಯಲ್ಲಿ ಸೌಹಾರ್ದ ವಾತಾವರಣ. ಆರೋಗ್ಯ ಚಿಂತೆ ಮಾಯ.    
ಕನ್ಯಾ
ಗುರಿ ಸಾಽಸಲು ಕಠಿಣ ಶ್ರಮ ಬೇಕು. ಸಂಗಾತಿ ಜತೆ ಭಿನ್ನಮತ. ಹೊಟ್ಟೆ ಸಂಬಂಽ ಅನಾರೋಗ್ಯ. ಶೇರು ಹೂಡಿಕೆಗೆ ಸಕಾಲವಲ್ಲ.      
ತುಲಾ
ಆತ್ಮೀಯರ ಉನ್ನತಿಗೆ ಇಂದು ಪರಿಶ್ರಮ ಪಡುವಿರಿ. ವೃತ್ತಿಯಲ್ಲಿ ಉದ್ವಿಗ್ನ ಸ್ಥಿತಿ ಮೂಡಿದರೂ ಬಳಿಕ ಶಮನ. ಸಹೋದ್ಯೋಗಿ ಸಹಕಾರ.
ವೃಶ್ಚಿಕ
ಆಪ್ತರ ಜತೆ ವ್ಯವಹರಿಸುವಾಗ ಹೃದಯದ ಭಾವಕ್ಕೆ  ಬೆಲೆ ಕೊಡಿ. ಎಲ್ಲವನ್ನು ತರ್ಕದಿಂದ ಯೋಚಿಸದಿರಿ.    
ಧನು
ಮನಸ್ಸಿಗೆ ಸಮಾಧಾನ ತರುವ ನಿರ್ಧಾರ ತಾಳುವಿರಿ. ಸಂಬಂಧದಲ್ಲಿ ಪ್ರಗತಿ. ಎಲ್ಲರ ಜತೆ ಬೆರೆಯಲು ಗಮನ ಕೊಡಿ.          
ಮಕರ
ವೃತ್ತಿ ಕ್ಷೇತ್ರದಲ್ಲಿ ಉಂಟಾಗಿದ್ದ ಬಿಗು ಪರಿಸ್ಥಿತಿ ಶಮನವಾಗಲಿದೆ. ಸಂಘರ್ಷಕ್ಕಿಂತ ಸಹಕಾರ ಒಳ್ಳೆಯದು. ಆರ್ಥಿಕ ವ್ಯವಹಾರದಲ್ಲಿ ಲಾಭ.        
ಕುಂಭ
ಧಾರ್ಮಿಕ ಕ್ಷೇತ್ರ ದರ್ಶನ. ಸಮಸ್ಯೆ ಪರಿಹಾರಕ್ಕೆ ಯತ್ನ. ಮಕ್ಕಳ ಸಾಧನೆ ಸಮಾಧಾನ ತರಲಿದೆ. ಖರ್ಚು ಕಡಿಮೆ ಮಾಡಲು ಆದ್ಯತೆ ಕೊಡಿ.  
ಮೀನ
ವಾಗ್ವಾದ ನಡೆದೀತು. ಕೆಲವರು ನಿಮ್ಮನ್ನು ಅಣಕ ಮಾಡಿಯಾರು. ಸಹನೆ ಇರಲಿ. ಸುಖದುಃಖ ಬದುಕಿನ ಅವಿಭಾಜ್ಯ ಅಂಗ ಎಂದರಿಯಿರಿ.        

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !