July 28, 2026
Tuesday, July 28, 2026
spot_img

ದೇಶದಲ್ಲಿ ಇಂಧನ ಕೊರತೆ ಇದೆಯಾ? ಲಾಕ್‌ಡೌನ್ ಆಗುತ್ತಾ? ಏನಂತಿದೆ ಕೇಂದ್ರ ಸರ್ಕಾರ??

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿನ ಒಂಧನ ಪೂರೈಕೆ ವ್ಯವಸ್ಥೆಯಲ್ಲಿ ಅಲ್ಪ ಅಡಚಣೆ ಉಂಟಾಗಿದೆ. ಆದರೆ ಕೊರತೆಯೂ ಇಲ್ಲ ಲಾಕ್‌ಡೌನ್ ಪರಿಸ್ಥಿತಿಯೂ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ.

ದೇಶದಲ್ಲಿ ಲಾಕ್‌ಡೌನ್ ಹೇರಲಾಗುತ್ತಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವದಂತಿಗಳು ಹರಡುತ್ತಿರುವ ಹಿನ್ನಲೆಯಲ್ಲಿ ಖುದ್ದು ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ದೇಶದಲ್ಲಿ ಕಚ್ಚಾ ತೈಲ ದಾಸ್ತಾನು ಸಾಕಷ್ಟಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಗೆ ಯಾವುದೇ ಕೊರತೆ ಇಲ್ಲ. ಗ್ರಾಹಕರ ಅನುಕೂಲಕ್ಕೆ ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಶೇ.70 ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗಿದೆ.

ಯಾವುದೇ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಲಾಕ್‌ಡೌನ್‌ನಂತಹ ಯಾವುದೇ ಪರಿಸ್ಥಿತಿ ಎದುರಾಗಿಲ್ಲ ಎಂದು ಹೇಳಿದ್ದಾರೆ. ಎಲ್ಲ ದೇಶಗಳು ಇಂಧನ ದರ ಹೆಚ್ಚಿಸಿವೆ. ಆದರೆ ಭಾರತದಲ್ಲಿ ಯಾವುದೇ ದರ ಏರಿಕೆಯಾಗಿಲ್ಲ. ಹಾಗಾಗಿ ಯಾರೂ ಕೂಡಾ ಆತಂಕಕ್ಕೆ ಒಳಗಾಗಿ ಪೆಟ್ರೋಲ್ ಬಂಕ್‌ಗಳ ಮುಂದೆ ಕ್ಯೂ ನಿಲ್ಲಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !