March 28, 2026
Saturday, March 28, 2026
spot_img

ದಿನಭವಿಷ್ಯ: ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳುವುದು ಇಂದಿನ ಆದ್ಯತೆಯಾಗಲಿ, ತಾಳ್ಮೆಯಿರಲಿ

ಮೇಷ
ಕೆಲ ಅಹಿತಕರ ಪ್ರಸಂಗದಿಂದಾಗಿ ನಿಮ್ಮ ಆತ್ಮವಿಶ್ವಾಸ ಕುಸಿತ. ಹೋರಾಟ ಮನೋಭಾವ ಬಿಡಬೇಡಿ. ಇತರರ ಮನಒಪ್ಪಿಸಬೇಕಾಗಿಲ್ಲ.                
ವೃಷಭ
ಶುಭ ಸುದ್ದಿ ಕೇಳುವಿರಿ. ಕೌಟುಂಬಿಕ ಸಂಭ್ರಮ. ಆರೋಗ್ಯ ಸಮಸ್ಯೆ ನಿವಾರಣೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮ ಪಡಿಸಲು ಯೋಜಿಸಿ.          
ಮಿಥುನ
  ಮನಸ್ಸಿನ ಶಾಂತಿ ಕಾಪಾಡಿ. ವಾಗ್ವಾದ, ಸಂಘರ್ಷಕ್ಕೆ ಇಳಿಯದಿರಿ. ಹೊಸ ವ್ಯವಹಾರ ಆರಂಭಕ್ಕೆ ಕಾಲ ಸುಸೂತ್ರವಾಗಿದೆ. ಬಂಧು ಸಹಕಾರ.      
ಕಟಕ
ಉದ್ದಿಮೆಯಲ್ಲಿ ಹಣ ಹೂಡಲು ಸೂಕ್ತ ಸಮಯ. ನಿಮ್ಮ ಮೃದು ಸ್ವಭಾವ ಒಳ್ಳೆ -ಲ ನೀಡದು. ಅವಶ್ಯ ಸಂದರ್ಭದಲ್ಲಿ ಕಠಿಣವಾಗಿ ವರ್ತಿಸಲು ಕಲಿಯಿರಿ.
ಸಿಂಹ
ಅಹಿತಕರ ಪ್ರಸಂಗ ಎದುರಿಸುವಿರಿ. ಜಾಣ್ಮೆಯಿಂದ ನಿಭಾಯಿಸಿ. ಆಕರ್ಷಕ ವ್ಯಕ್ತಿಯ ಜತೆ ಸ್ನೇಹ ಬೆಳೆದೀತು. ಭಾವುಕ ಸನ್ನಿವೇಶಕ್ಕೆ ಸಾಕ್ಷಿ.    
ಕನ್ಯಾ
ಕಲಾವಿದರಿಗೆ  ಉತ್ತಮ ದಿನ. ಕೌಟುಂಬಿಕ ಪರಿಸರ ಉಲ್ಲಾಸದಾಯಕ. ನೆಂಟರಿಷ್ಟರ ಸಮ್ಮುಖ ಆತ್ಮೀಯ ಕಾಲಕ್ಷೇಪ. ಆರ್ಥಿಕ ಉನ್ನತಿ.  
ತುಲಾ
ಸ್ಪಷ್ಟವಾಗಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ಕಹಿಸತ್ಯ ಹೇಳಲು ಹಿಂಜರಿಕೆ ಬೇಡ. ವ್ಯವಹಾರದಲ್ಲಿ ತುಸು ಹಿನ್ನಡೆ ಉಂಟಾದೀತು.      
ವೃಶ್ಚಿಕ
  ಹಳಬರ ಭೇಟಿ ಸಂಭವ. ಹಳೆ ನೆನಪು ಕೆದುಕುವಿರಿ. ನಿಮ್ಮ ವ್ಯವಹಾರದಲ್ಲಿ ಅಡ್ಡಿ ಒದಗೀತು. ಸಹನೆಯ ನಡೆ ಒಳ್ಳೆಯದು.    
ಧನು
  ಕಠಿಣ ಪರಿಸ್ಥಿತಿ ಒದಗಿದರೂ ಆತ್ಮವಿಶ್ವಾಸ ಬಿಡಬೇಡಿ. ಎಲ್ಲ ಕಷ್ಟವೂ ತಾತ್ಕಾಲಿಕ. ಅನಿರೀಕ್ಷಿತ ನೆರವು ಒದಗಲಿದೆ. ಬಂಧು ಭೇಟಿಯಿಂದ ಸಂತಸ.
ಮಕರ
 ಸಂಘಟಿತ ಕಾರ್ಯ ದಿಂದ ಯಶಸ್ಸು. ಏಕಾಂಗಿ ಪ್ರಯತ್ನ -ಲ ನೀಡದು. ಕೇಳಿದವರಿಗೆಲ್ಲ ಹಣ ನೀಡಬೇಡಿ. ಕೌಟುಂಬಿಕ ಹೊಣೆ ಹೆಚ್ಚಳ.    
ಕುಂಭ
 ಮುತುವರ್ಜಿ ಯಿಂದ ಕೆಲಸ ನಿರ್ವಹಿಸಿ. ಉದಾಸೀನತೆ ಕಾರ್ಯ ಕೆಡಿಸಬಹುದು. ಸಂಬಂಧ ಪಡದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ.          
ಮೀನ
ಹಣದ ವಿವಾದ ಪರಿಹಾರ. ಸಂಬಂಧದಲ್ಲಿ ಯಾವುದೇ ಅನುಮಾನ ಇಟ್ಟುಕೊಳ್ಳದಿರಿ. ಸಂವಹನ ಕೊರತೆಯಿಂದ ಆಪ್ತರ ಜತೆ ಮುನಿಸು ಸಂಭವ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !