March 28, 2026
Saturday, March 28, 2026
spot_img

HOME | ಮನೆಗೆ ಯಾವ ಫ್ಲೋರಿಂಗ್‌ ಬೆಸ್ಟ್‌? ಇಲ್ಲಿದೆ ನಾಲ್ಕು ಬೆಸ್ಟ್‌ ಆಪ್ಷನ್ಸ್‌

ಕನಸಿನ ಮನೆಯನ್ನು ಕಟ್ಟುವವರಿಗೆ ಮನೆಗೆ ಯಾವ ಫ್ಲೋರಿಂಗ್‌ ಉತ್ತಮ ಅನ್ನೋದು ಚಿಂತೆಯಾಗಿರುತ್ತದೆ. ಗ್ರಾನೈಟ್ಸ್‌, ಮಾರ್ಬಲ್‌, ಕಾವಿ, ವೆಟ್ರಿಫೈಡ್‌, ರೆಡ್‌ ಆಕ್ಸೈಡ್‌, ಆಥನಗುಡಿ ಹೀಗೆ ನೂರಾರು ಆಪ್ಷನ್ಸ್‌ ಇದೆ. ಇದರಲ್ಲಿ ನಿಮ್ಮ ಮನೆಗೆ ಯಾವುದು ಬೆಸ್ಟ್‌? ಇಲ್ಲಿದೆ ಡೀಟೇಲ್ಸ್‌..

ಗ್ರಾನೈಟ್‌

ಇದು ದೀರ್ಘಕಾಲ ಬಾಳಿಕೆ ಬರುತ್ತದೆ. ಒದ್ದೆ ಹಾಗೂ ಡ್ರೈ ಏರಿಯಾ ಎರಡಕ್ಕೂ ಬಳಕೆ ಮಾಬಹುದು. ಆದರೆ ಇದಕ್ಕೆ ಸ್ವಲ್ಪ ಖರ್ಚಾಗುತ್ತದೆ, ಇನ್ಸ್ಟಾಲ್‌ ಮಾಡುವುದಕ್ಕೂ ಬಹಳ ಸಮಯ ಬೇಕಾಗುತ್ತದೆ.

ಮಾರ್ಬಲ್ಸ್‌

ಮಾರ್ಬಲ್ಸ್‌ ಎಂದರೆ ಅದು ನೈಸರ್ಗಿಕವಾದ ಕಲ್ಲು, ಇದರ ಬಾಳಿಕೆ ಬಗ್ಗೆ ಹೇಳಬೇಕಿಲ್ಲ. ಮನೆಗೆ ಲಕ್ಷುರಿಯಾದ ಲುಕ್‌ ನೀಡುತ್ತದೆ. ಆದರೆ ಇದು ಸ್ವಲ್ಪ ದುಬಾರಿ ಹಾಗೂ ಚಳಿಗಾಲದಲ್ಲಿ ಅತೀ ಚಳಿಯಾಗುತ್ತದೆ.

ವೆಟ್ರಿಫೈಡ್‌ ಟೈಲ್ಸ್

ವೆಟ್ರಿಫೈಡ್‌ ಟೈಲ್ಸ್‌ಗಳನ್ನು ಈಗ ಸಾಕಷ್ಟು ಮಂದಿ ಬಳಕೆ ಮಾಡುತ್ತಿದ್ದಾರೆ. ಇದು ಬಜೆಟ್‌ ಫ್ರೆಂಡ್ಲಿ, ಸಾಕಷ್ಟು ಡಿಸೈನ್‌ ಸಿಗುತ್ತದೆ. ವೆಟ್‌ ಹಾಗೂ ಡ್ರೈ ಏರಿಯಾಗಳಿಗೆ ಸೂಕ್ತ. ಆದರೆ ಭಾರದ ವಸ್ತು ಬಿದ್ದರೆ ಟೈಲ್ಸ್‌ ಒಡೆದುಹೋಗುತ್ತದೆ. ಗಲೀಜಾದರೆ ಕ್ಲೀನ್‌ ಮಾಡುವುದು ಕಷ್ಟ. ಎಲ್ಲ ಮನೆಗಳಲ್ಲಿಯೂ ಹಾಕಿಸುವ ಕಾರಣ ಅಷ್ಟೇನೂ ಸ್ಪೆಷಲ್‌ ಅನಿಸೋದಿಲ್ಲ.

ಆಥನಗುಡಿ ಹಾಗೂ ಕಾವಿ ಫ್ಲೋರಿಂಗ್‌

ಆಥನಗುಡಿ ಹಾಗೂ ಕಾವಿ ಫ್ಲೋರಿಂಗ್‌ ಮನೆಗೆ ಟ್ರಡಿಷನಲ್‌ ಲುಕ್‌ ನೀಡುತ್ತದೆ. ಆರೋಗ್ಯಕ್ಕೆ ಇದು ಬೆಸ್ಟ್‌ ಎನ್ನಬಹುದು. ಮಣ್ಣಿನಿಂದ ಹಾಗೂ ಹ್ಯಾಂಡ್‌ಮೇಡ್‌ ಆದ ಇವು ಆರೋಗ್ಯ ಕಾಪಾಡಲು ಸಹಕರಿಸುತ್ತವೆ.

ಆದರೆ ಒರಿಜಿನಲ್‌ ಹಾಗೂ ಫೇಕ್‌ ಬಗ್ಗೆ ಗಮನಹರಿಸಬೇಕು, ಮೇಂಟೇನೆನ್ಸ್‌ ಕಷ್ಟ, ಅಷ್ಟೊಂದು ದೀರ್ಘ ಬಾಳಿಕೆ ಇಲ್ಲ. ಹಣ ಹಾಗೂ ಇನ್ಸ್ಟಾಲೇಷನ್‌ ಕಷ್ಟ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !