July 10, 2026
Friday, July 10, 2026
spot_img

ಸೌದಿ ವಾಯುನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ: ಅಮೆರಿಕದ ದುಬಾರಿ ವಿಮಾನ ಧ್ವಂಸ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತಷ್ಟು ತ್ರೀವಗೊಳ್ಳುತ್ತಿದ್ದು, ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಏರ್ ಬೇಸ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಅಮೆರಿಕದ ದುಬಾರಿ E-3 ಸೆಂಟ್ರಿ ಅವಾಕ್ಸ್ ವಿಮಾನ ಧ್ವಂಸಗೊಂಡಿದೆ.

ಸೌದಿಯ ಪ್ರಿನ್ಸ್ ಸುಲ್ತಾನ್ ವಾಯುನೆಲೆ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 29 ಆತ್ಮಹತ್ಯಾ ಡ್ರೋನ್‌ ಗಳ ಮೂಲಕ ದಾಳಿ ನಡೆಸಲಾಗಿದ್ದು, ಅಮೆರಿಕದ 10 ಸೈನಿಕರು ಗಾಯಗೊಂಡಿದ್ದಾರೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸುಮಾರು 2,500 ಕೋಟಿ ರೂಪಾಯಿ ಮೌಲ್ಯದ E-3 ಸೆಂಟ್ರಿ ವಿಮಾನ ಎಂದು ಅಂದಾಜಿಸಲಾಗಿದ್ದು, ದಾಳಿ ವೇಳೆ ಇತರೆ ವಿಮಾನಗಳು ಹಾನಿಗೊಳಗಾಗಿವೆ ಎಂದು ವರದಿಗಳು ಹೇಳಿವೆ.E3-ಸೆಂಟ್ರಿ ಅವಾಕ್ಸ್ ವಿಮಾನ ಶತ್ರು ಡ್ರೋನ್‌, ಕ್ಷಿಪಣಿ, ಯುದ್ಧವಿಮಾನ ಹಾಗು ಟ್ಯಾಂಕರ್‌ಗಳ ಚಲನವಲನಗಳ ಮಾಹಿತಿ ನೀಡುತ್ತದೆ. 250 ಮೈಲುಗಳ ವ್ಯಾಪ್ತಿಯಲ್ಲಿ ನಡೆಯುವ ಬೆಳವಣಿಗೆಯನ್ನು ಕಂಡು ಹಿಡಿಯಬಲ್ಲದು.

ಆದರೆ ಘಟನೆ ಕುರಿತು ಅಮೆರಿಕ ಸೆಂಟ್ರಲ್ ಕಮಾಂಡ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !