March 30, 2026
Monday, March 30, 2026
spot_img

IPL | ಅವರ ಶಾಟ್‌ ನೋಡಿದ್ರೆ ಸಾಕಿತ್ತು…! ರೋಹಿತ್ ಬ್ಯಾಟಿಂಗ್‌ಗೆ ಪಾಂಡ್ಯ ಕ್ಲೀನ್ ಬೌಲ್ಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ದಾಖಲಿಸಿದ್ದು, 13 ವರ್ಷಗಳ ಬಳಿಕ ಸೀಸನ್ ಆರಂಭವನ್ನು ಜಯದೊಂದಿಗೆ ಆರಂಭಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ 221 ರನ್‌ಗಳ ಗುರಿಯನ್ನು ಮುಂಬೈ 19.1 ಓವರ್‌ಗಳಲ್ಲಿ ಬೆನ್ನಟ್ಟಿತು.

ಈ ಗೆಲುವಿನ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, ತಂಡದ ಆರಂಭಿಕ ಜೋಡಿ ರೋಹಿತ್ ಶರ್ಮ ಮತ್ತು ರಯಾನ್ ರಿಕೆಲ್ಟನ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಮನಸಾರೆ ಹೊಗಳಿದ್ದಾರೆ.

“ಮೊದಲ ಪಂದ್ಯದಲ್ಲಿ ಗೆಲ್ಲಲು ನಾವು ಹಲವು ವರ್ಷಗಳಿಂದ ಕಾಯುತ್ತಿದ್ದೆವು. ಅದು ಕೂಡ ಇಷ್ಟು ದೊಡ್ಡ ಮೊತ್ತವನ್ನು ಚೇಸ್ ಮಾಡಿ ಗೆದ್ದಿರುವುದು ಇನ್ನಷ್ಟು ಖುಷಿ ನೀಡಿದೆ,” ಎಂದು ಹಾರ್ದಿಕ್ ಹೇಳಿದ್ದಾರೆ.

ಕೆಕೆಆರ್ ಪವರ್‌ಪ್ಲೇನಲ್ಲಿ ಆಡಿದ ರೀತಿ ನೋಡಿದಾಗಲೇ ಪಿಚ್ ಬ್ಯಾಟಿಂಗ್‌ಗೆ ಸಹಾಯಕ ಎಂದು ತಿಳಿದಿತ್ತು. ಆದರೆ ಅವರನ್ನು 240–250 ರನ್‌ಗೆ ತಲುಪದಂತೆ ತಡೆಯುವುದು ಮುಖ್ಯ ಉದ್ದೇಶವಾಗಿತ್ತು. ನಮ್ಮ ಬೌಲರ್‌ಗಳು ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ:

ರೋಹಿತ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಬಗ್ಗೆ ವಿಶೇಷವಾಗಿ ಮಾತನಾಡಿದ ಹಾರ್ದಿಕ್, “ಅವರ ಶಾಟ್‌ಗಳನ್ನು ನೋಡಿದರೆ ಎಲ್ಲರೂ ಕ್ಷಣಕಾಲ ನಿಶ್ಶಬ್ದವಾಗಿಬಿಡುತ್ತಾರೆ. ಅವರು ಎಂತಹ ಆಟಗಾರ ಎನ್ನುವುದು ಮತ್ತೆ ಸಾಬೀತಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್ ಪ್ರದರ್ಶನವನ್ನೂ ಹಾರ್ದಿಕ್ ಪ್ರಶಂಸಿಸಿ, ತಂಡಕ್ಕೆ ಅವರು ಮಹತ್ವದ ಬಲವಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಟ್ಟಾರೆ, 13 ವರ್ಷಗಳ ಬಳಿಕ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್ ಆತ್ಮವಿಶ್ವಾಸದೊಂದಿಗೆ ಮುಂದಿನ ಪಂದ್ಯಗಳಿಗೆ ಸಜ್ಜಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !