March 30, 2026
Monday, March 30, 2026
spot_img

ತಮಿಳುನಾಡು ಚುನಾವಣಾ ರಣರಂಗ: ನಾಮಪತ್ರ ಸಲ್ಲಿಸಿದ ಸ್ಟಾಲಿನ್, ವಿಜಯ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ವಿಧಾನಸಭಾ ಚುನಾವಣೆಯ ರಾಜಕೀಯ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಟಿವಿಕೆ ನಟ-ರಾಜಕಾರಣಿ ವಿಜಯ್ ಸೋಮವಾರ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಕಣಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿದ್ದಾರೆ.

ಸ್ಟಾಲಿನ್ ಅವರು ಮತ್ತೆ ಕೊಲತ್ತೂರು ಕ್ಷೇತ್ರದಿಂದಲೇ ಕಣಕ್ಕಿಳಿದಿದ್ದು, ಇದೇ ಕ್ಷೇತ್ರದಿಂದ ನಾಲ್ಕನೇ ಬಾರಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ಬಳಿಕ ಅವರು ರೋಡ್‌ ಶೋ ನಡೆಸಿ ಜನರ ಬೆಂಬಲ ಕೋರಿದರು. ಕಳೆದ ಚುನಾವಣೆಗಳಿಗಿಂತ ಈ ಬಾರಿ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಇನ್ನೊಂದೆಡೆ, ವಿಜಯ್ ಅವರ ರಾಜಕೀಯ ಪಕ್ಷ ಟಿವಿಕೆಯ ಮೊದಲ ವಿಧಾನಸಭಾ ಚುನಾವಣೆ ಇದಾಗಿದ್ದು, ಅವರ ಎಂಟ್ರಿ ರಾಜಕೀಯ ಕಣದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ವಿಜಯ್ ಪೆರಂಬೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇದು ಅವರ ಚುನಾವಣಾ ರಾಜಕೀಯದ ಚೊಚ್ಚಲ ಹೆಜ್ಜೆಯಾಗಿದೆ. ಅಭಿಮಾನಿಗಳ ಭಾರೀ ಬೆಂಬಲದ ನಡುವೆ ಅವರ ನಾಮಪತ್ರ ಸಲ್ಲಿಕೆ ಶಕ್ತಿ ಪ್ರದರ್ಶನದಂತಿತ್ತು.

ರಾಜ್ಯದ ರಾಜಕೀಯದಲ್ಲಿ ಅನುಭವಿಗಳಾದ ಸ್ಟಾಲಿನ್ ಮತ್ತು ಹೊಸ ಮುಖವಾದ ವಿಜಯ್ ನಡುವಿನ ಈ ಮುಖಾಮುಖಿ ಮುಂದಿನ ದಿನಗಳಲ್ಲಿ ಇನ್ನಷ್ಟು ರೋಚಕ ತಿರುವು ಪಡೆಯುವ ನಿರೀಕ್ಷೆ ಇದೆ. ಚುನಾವಣಾ ಪ್ರಚಾರ ಕಾವು ಈಗಾಗಲೇ ಗರಿಗೆದರಿದ್ದು, ಮತದಾರರ ಗಮನ ಸೆಳೆಯಲು ಪಕ್ಷಗಳು ಭರ್ಜರಿ ಸಿದ್ಧತೆ ಆರಂಭಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !