April 2, 2026
Thursday, April 2, 2026
spot_img

ಬ್ಯಾಂಕ್ ವಂಚನೆ ಪ್ರಕರಣ: ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ದೋಷಿ ಎಂದ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವದೆಹಲಿ ನ್ಯಾಯಾಲಯದಿಂದ ಬಂದ ತೀರ್ಪು ಮಧ್ಯಪ್ರದೇಶ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಹಿರಿಯ ಶಾಸಕ ರಾಜೇಂದ್ರ ಭಾರ್ತಿ ವಿರುದ್ಧದ ಬಹುಕಾಲದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ದೋಷಿ ಎಂದು ಘೋಷಿಸಿದ್ದು, ಇದರಿಂದ ಪಕ್ಷಕ್ಕೆ ದೊಡ್ಡ ರಾಜಕೀಯ ಹಿನ್ನಡೆಯಾಗಿದೆ. ತೀರ್ಪಿನ ತಕ್ಷಣವೇ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ.

ದಾಟಿಯಾ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ 68 ವರ್ಷದ ರಾಜೇಂದ್ರ ಭಾರ್ತಿ ವಿರುದ್ಧ ಸ್ಥಿರ ಠೇವಣಿ (FD) ದಾಖಲೆಗಳಲ್ಲಿ ತಿರುಚುವಿಕೆ, ನಕಲಿ ದಾಖಲೆ ಸೃಷ್ಟಿ ಮತ್ತು ವಂಚನೆ ಆರೋಪಗಳು ಸಾಬೀತಾಗಿವೆ. ಈ ಪ್ರಕರಣವು 1998ಕ್ಕೂ ಮುನ್ನ ಅವರ ತಾಯಿ ಸಾವಿತ್ರಿ ದೇವಿ ಅವರ ಹೆಸರಿನ ಬ್ಯಾಂಕ್ ಠೇವಣಿಗೆ ಸಂಬಂಧಿಸಿದ್ದು, ದಾಖಲೆಗಳಲ್ಲಿ ಅಕ್ರಮ ಬದಲಾವಣೆ ಮಾಡಿ ಹಣಕಾಸು ಲಾಭ ಪಡೆಯಲು ಯತ್ನಿಸಲಾಗಿದೆ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ.

ಇದನ್ನೂ ಓದಿ:

ಈ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ರಘುವೀರ್ ಶರಣ್ ಪ್ರಜಾಪತಿಗೂ ದೋಷಿ ತೀರ್ಪು ನೀಡಲಾಗಿದೆ. ಇಬ್ಬರಿಗೂ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಗುರುವಾರ ಪ್ರಕಟಿಸಲಿದೆ. ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸಿದರೆ, ರಾಜೇಂದ್ರ ಭಾರ್ತಿ ಅವರ ವಿಧಾನಸಭಾ ಸದಸ್ಯತ್ವಕ್ಕೂ ಧಕ್ಕೆಯಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !