ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧ ಕಾಂಗ್ರೆಸ್ ವಿದೇಶಿ ಪಾಸ್ಪೋರ್ಟ್ಗಳು ಮತ್ತು ದುಬೈನಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಮಾಡಿದ್ದು , ಇದಕ್ಕೆ ತಿರುಗೇಟು ನೀಡಿದ ರಿನಿಕಿ,ಈ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು ಎಂದು ಹರಿಹಾಯ್ದಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ರಿನಿಕಿ, ಈ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ನಕಲಿ ದಾಖಲೆಗಳನ್ನು ಆಧರಿಸಿವೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕರ ಹೇಳಿಕೆಗಳು ನಗೆಪಾಟಲಿನ ಸಂಗತಿ ನನಗಾಗಲಿ, ನನ್ನ ಪತಿ ಅಥವಾ ಮಕ್ಕಳಿಗಾಗಲಿ ದುಬೈ ಸೇರಿದಂತೆ ವಿದೇಶದ ಯಾವುದೇ ಭಾಗದಲ್ಲಿ ಆಸ್ತಿ ಅಥವಾ ವ್ಯಾಪಾರ ಹಿತಾಸಕ್ತಿಗಳಿಲ್ಲ . ಈ ಎಲ್ಲಾ ಕಾಂಗ್ರೆಸ್ನ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಉದ್ದೇಶಪೂರ್ವಕವಾಗಿ ಜನರನ್ನು ದಾರಿತಪ್ಪಿಸುವ ಪ್ರಯತ್ನ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಗೌರವ್ ಗೊಗೊಯ್ಗೆ ನೇರ ಸವಾಲು ಹಾಕಿದ ರಿನಿಕಿ, ನಿಮ್ಮ ಪತ್ನಿ ಪಾಕಿಸ್ತಾನದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ವಿವರಗಳನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಿದ್ದಾರೆ.



