ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಿಧಾನಸೌಧದ ಆವರಣದೊಳಕ್ಕೆ ಅಪರಿಚಿತ ವ್ಯಕ್ತಿ ಕಾರನ್ನು ನುಗ್ಗಿಸಿ ಆತಂಕ ಸೃಷ್ಟಿಸಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಯುಪಿ ನೋಂದಣಿ ಹೊಂದಿರುವ ವಾಹನ ವಿಧಾನಸೌಧದ ಸಂಕೀರ್ಣದ ಹೊರಗೆ ಅಳವಡಿಸಿದ್ದ ಭದ್ರತಾ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದು ಒಳನುಗ್ಗಿದ್ದು, ಬಳಿಕ ಮುಖವಾಡ ಧರಿಸಿದ್ದ ಕಾರಿನ ಚಾಲಕ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಯ ಕಡೆಗೆ ತೆರಳಿ, ಮುಖಮಂಟಪದ ಬಳಿ ಪುಷ್ಪಗುಚ್ಛ ಇರಿಸಿ ಪರಾರಿಯಾಗಿದ್ದಾನೆ.
ಇದರ ಬೆನ್ನಲ್ಲೇ ಪೊಲೀಸ್ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಶಂಕಿತ ಕಾರಿನ ವಿವರಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹಂಚಿಗೊಂಡಿದ್ದು, ಆತ ಓಡಿಸುತ್ತಿದ್ದ ಟಾಟಾ ಸಿಯಾರಾ ಕಾರನ್ನು ಉತ್ತರ ದೆಹಲಿಯ ಜನನಿಬಿಡ ವಸತಿ ಪ್ರದೇಶವಾದ ರೂಪ್ ನಗರದಿಂದ ವಶಪಡಿಸಿಕೊಳ್ಳಲಾಗಿದೆ.



