April 8, 2026
Wednesday, April 8, 2026
spot_img

ಮತದಾನಕ್ಕೆ ಕೌಂಟ್ ಡೌನ್ ಶುರು: ನಾಳೆ ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ‘ಮಹಾ ಸಮರ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಏಪ್ರಿಲ್ 9 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಮಂಗಳವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಅಭ್ಯರ್ಥಿಗಳು ಈಗ ಮನೆ ಮನೆ ಪ್ರಚಾರದತ್ತ ಗಮನ ಹರಿಸಿದ್ದಾರೆ. ಈ ಮೂರೂ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ರಾಜ್ಯವಾರು ಚುನಾವಣಾ ಅಂಕಿ-ಅಂಶಗಳು:

ವಿವರಗಳುಅಸ್ಸಾಂಕೇರಳಪುದುಚೇರಿ
ಒಟ್ಟು ಸ್ಥಾನಗಳು12614030
ಬಹುಮತದ ಸಂಖ್ಯೆ647116
ಒಟ್ಟು ಅಭ್ಯರ್ಥಿಗಳು722890
ಒಟ್ಟು ಮತದಾರರು2.5 ಕೋಟಿ 2.71 ಕೋಟಿ9.44 ಲಕ್ಷ
ಪುರುಷ ಮತದಾರರು1.25 ಕೋಟಿ1.32 ಕೋಟಿ4.43 ಲಕ್ಷ
ಮಹಿಳಾ ಮತದಾರರು1.25 ಕೋಟಿ1.39 ಕೋಟಿ5.00 ಲಕ್ಷ
ತೃತೀಯ ಲಿಂಗಿಗಳು343273139

ಅಸ್ಸಾಂನಲ್ಲಿ 18-19 ವರ್ಷ ವಯಸ್ಸಿನ ಸುಮಾರು 57.5 ಮಿಲಿಯನ್ ಯುವಕರು ಮೊದಲ ಬಾರಿಗೆ ಮತ ಚಲಾಯಿಸುತ್ತಿರುವುದು ವಿಶೇಷ.

ಇತ್ತ ಮೂರು ರಾಜ್ಯಗಳಲ್ಲಿ ಪ್ರಚಾರ ಮುಗಿದಿದ್ದರೆ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಪ್ರಚಾರದ ಅಬ್ಬರ ಜೋರಾಗಿದೆ.

ತಮಿಳುನಾಡು: ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಚುನಾವಣೆ.

ಪಶ್ಚಿಮ ಬಂಗಾಳ: ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಮತದಾನ.

1951 ರ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 126 ರ ಅನ್ವಯ, ಮತದಾನಕ್ಕೆ 48 ಗಂಟೆಗಳ ಮುನ್ನವೇ ಪ್ರಚಾರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ರ್ಯಾಲಿ ಅಥವಾ ಮೆರವಣಿಗೆಗಳನ್ನು ನಡೆಸುವಂತಿಲ್ಲ. ಸಂಗೀತ, ನಾಟಕ ಅಥವಾ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ.

ಟಿವಿ, ಸಿನಿಮಾ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಸಾಮಗ್ರಿ ಪ್ರದರ್ಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !