April 10, 2026
Friday, April 10, 2026
spot_img

ನಟ ವಿಜಯ್ ರೋಡ್ ಶೋ ವೇಳೆ ಅವಘಡ: ಬೈಕ್ ಸ್ಕಿಡ್ ಆಗಿ ಬಿದ್ದ ಯುವಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ವಿಧಾನಸಭೆ ಚುನಾವಣಾ ಅಖಾಡಕ್ಕೆ ಮೊದಲ ಬಾರಿ ಇಳಿದ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇದರ ನಡುವೆ ಆಘಾತ ಎದುರಾಗಿದೆ.

ತಮಿಳುನಾಡಿನ ಶಿವಗಂಗಾದಲ್ಲಿ ಚುನಾವಣಾ ಪ್ರಚಾರದ ರೋಡ್ ಶೋ ವೇಳೆ ಬೈಕ್ ನಲ್ಲಿ ಬಂದ ಯುವಕನೊಬ್ಬ ನಿಯಂತ್ರಣ ತಪ್ಪಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ .

ನಟ ವಿಜಯ್ ಅವರ ತೆರಳುತ್ತಿದ್ದ ವಾಹನವನ್ನು ಹಿಂಬಾಲಿಸಿಕೊಂಡು ಕೆಲ ಯುವಕರ ಗುಂಪು ಬೈಕ್ ಗಳಲ್ಲಿ ತೆರಳಿದ್ದು, ಈ ವೇಳೆ ಓರ್ವ ಯುವಕ ಚಲಿಸುತ್ತಿದ್ದ ಬೈಕ್ ನಿಂದಲೇ ಸೆಲ್ಫಿ ತೆಗೆದುಕೊಳ್ಳಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ.

ಈ ಹಿಂದೆಯೂ ಕೂಡ ನಟ ವಿಜಯ್ ಅವರ ಪ್ರಚಾರದ ವೇಳೆ ಇಂತಹ ಘಟನೆ ಸಂಭಸಿದ್ದು, ಕಳೆದ ವರ್ಷ ಕರೂರಿನಲ್ಲೂ ನಡೆದ ಕಾಲ್ತುಳಿತದಲ್ಲಿ 41 ಜನರು ಪ್ರಾಣ ಕಳೆದುಕೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !