ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಸೀರೆ ನೀಡುವುದಾಗಿ ಘೋಷಿಸಿದ್ದ ಸಿಎಂ ರೇವಂತ್ ರೆಡ್ಡಿ ಈ ಬಾರಿಯೂ ಮತ್ತೆ ಹೊಸ ಸೀರೆಗಳನ್ನು ನೀಡಲು ನಿರ್ಧರಿಸಿದ್ದು, ಅದಕ್ಕಾಗಿ 450 ಕೋಟಿ ರೂ. ವೆಚ್ಚದಲ್ಲಿ ಬರೋಬ್ಬರಿ 1 ಕೋಟಿ ಸೀರೆಗಳನ್ನು ಖರೀದಿಸಲು ಮುಂದಾಗಿದ್ದಾರೆ.
ಇಂದಿರಾ ಗಾಂಧಿ ಜಯಂತಿಯಂದು ರಾಜ್ಯದ ಮಹಿಳೆಯರಿಗೆ ಸೀರೆ ನೀಡುವ ಯೋಜನೆಯನ್ನು ಸರಕಾರ ಜಾರಿಗೆ ತಂದಿತ್ತು. ಇದರ ಭಾಗವಾಗಿ, ಕಳೆದ ವರ್ಷ ಸುಮಾರು 86 ಲಕ್ಷ ಜನರಿಗೆ ಸೀರೆಗಳನ್ನು ವಿತರಿಸಲಾಗಿತ್ತು. ಹೀಗಾಗಿ ಈ ಬಾರಿಯೂ ಸೀರೆ ನೀಡಲು ನಿರ್ಧರಿಸಿದ್ದು, ಹೊಸ ಬಣ್ಣ ಮತ್ತು ವಿನ್ಯಾಸದಿಂದ ಇರುವಂತೆ ತಿಳಿಸಿದ್ದಾರೆ.
ಈ ಬಾರಿ ಗಿಳಿ ಹಸಿರು ಸೀರೆಗೆ ಕೆಂಪು ಜರಿ ಇರುವ ಸೀರೆಗಳನ್ನು ನೀಡಲು ಸರಕಾರ ಮುಂದಾಗಿದ್ದು, ಅಕ್ಟೋಬರ್ ವೇಳೆಗೆ ಸೀರೆಗಳ ಉತ್ಪಾದನೆಯನ್ನು ಪೂರ್ಣಗೊಳಿಸಲು ಮತ್ತು ನವೆಂಬರ್ ನಲ್ಲಿ ಇಂದಿರಾ ಗಾಂಧಿ ಜಯಂತಿ ದಿನ ಸೀರೆಗಳನ್ನು ವಿತರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.



