October 18, 2026
Sunday, October 18, 2026
spot_img

ಸೋಲಿನ ನಡುವೆ MI ಗೆ ಮತ್ತೊಂದು ಟೆನ್ಶನ್: ಸ್ಟಾರ್ ಬ್ಯಾಟರ್ ಗೆ ಗಾಯ, ಮುಂದಿನ ಪಂದ್ಯಕ್ಕೆ ಡೌಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವಿನಿಂದ ಲೀಗ್ ಆರಂಭಿಸಿದ್ದ ತಂಡ, ಬಳಿಕ ಸತತವಾಗಿ ಮೂರು ಪಂದ್ಯಗಳಲ್ಲಿ ಜಯ ದಾಖಲಿಸಲು ವಿಫಲವಾಗಿದೆ. ಈಗ ತಂಡದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಗಾಯಗೊಂಡಿರುವ ಸುದ್ದಿ ಅಭಿಮಾನಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ರೋಹಿತ್ ಅಸ್ವಸ್ಥತೆಯನ್ನು ಅನುಭವಿಸಿದ್ದು, ಇನ್ನಿಂಗ್ಸ್ ಮಧ್ಯದಲ್ಲೇ ಡಗೌಟ್‌ಗೆ ಮರಳಿದರು. ಪಂದ್ಯವು ನಿರ್ಣಾಯಕ ಹಂತದಲ್ಲಿದ್ದರೂ ಅವರು ಮತ್ತೆ ಕ್ರೀಸ್‌ಗೆ ಮರಳದಿರುವುದು ಗಾಯದ ತೀವ್ರತೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.

ಇದನ್ನೂ ಓದಿ:

ತಂಡದ ಮೂಲಗಳ ಪ್ರಕಾರ, ರೋಹಿತ್ ಅವರಿಗೆ ಮಂಡಿರಜ್ಜು ಭಾಗದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗುತ್ತದೆ ಎನ್ನಲಾಗಿದೆ. ವರದಿ ಬಂದ ನಂತರವೇ ಮುಂದಿನ ಪಂದ್ಯದಲ್ಲಿ ಅವರು ಆಡಲಿದ್ದಾರೆಯೇ ಎಂಬುದು ಸ್ಪಷ್ಟವಾಗಲಿದೆ.

ಮುಂಬೈ ಇಂಡಿಯನ್ಸ್ ತಂಡವು ಏಪ್ರಿಲ್ 16ರಂದು ಪಂಜಾಬ್ ಕಿಂಗ್ಸ್ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಆಡಲಿದ್ದು, ಅದಕ್ಕೂ ಮೊದಲು ರೋಹಿತ್ ಸಂಪೂರ್ಣ ಫಿಟ್ ಆಗಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ.

Must Read