April 15, 2026
Wednesday, April 15, 2026
spot_img

HEALTH | ದೇಹಕ್ಕೆ ಮೊಸರು ಹೀಟ್‌, ಮಜ್ಜಿಗೆ ತಂಪು ಹೀಗ್ಯಾಕೆ?

ಬೇಸಿಗೆಯಲ್ಲಿ ಎಲ್ಲಿ ನೋಡಿದ್ರೂ ಮಜ್ಜಿಗೆ ಕೊಡಲಾಗುತ್ತದೆ. ಈ ಸಮಯದಲ್ಲಿ ದೇಹಕ್ಕೆ ಹೀಟ್‌ ಆಗುತ್ತದೆ, ಅದನ್ನು ಹೋಗಲಾಡಿಸಲು ಮಜ್ಜಿಗೆಯನ್ನು ಕುಡಿಯಲಾಗುತ್ತದೆ. ಆದರೆ ಮೊಸರನ್ನು ಹೀಟ್‌ ಎಂದು ಹೇಳಲಾಗುತ್ತದೆ. ಮೊಸರು ಹಾಗೂ ಮಜ್ಜಿಗೆ ಒಂದೇ ಪ್ರಾಡಕ್ಟ್ಸ್‌ ಅಲ್ಲವೇ? ಒಂದು ಹೀಟ್‌ ಮತ್ತೊಂದು ತಂಪು ಯಾಕೆ?

ಮೊಸರು:

ಇದು ಗಾಢವಾಗಿರುತ್ತದೆ. ಗಟ್ಟಿಯಾಗಿರುತ್ತದೆ ಹಾಗೂ ತಣ್ಣಗೆ ಇರುತ್ತದೆ. ಇದನ್ನು ನೀವು ಸೇವಿಸಿದಾಗ ದೇಹ ಇದನ್ನು ಹೈ ಕ್ಯಾಲೋರಿ ಪದಾರ್ಥದಂತೆ ಸ್ವೀಕರಿಸುತ್ತದೆ. ಮೊಸರನ್ನು ಅರಗಿಸಿಕೊಳ್ಳಲು ದೇಹದ ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಸಮಯ ಹಾಗೂ ಶ್ರಮ ಬೇಕಾಗುತ್ತದೆ. ಕೆಲಸ ಮಾಡುವಾಗ ದೇಹ ಬಿಸಿಯಾಗುತ್ತದೆ. ಅದನ್ನೇ ಬಾಡಿಹೀಟ್‌ ಎನ್ನುತ್ತಾರೆ.

ಮಜ್ಜಿಗೆ:

ಮೊಸರಿಗೆ ನೀರು ಉಪ್ಪು ಹಾಕಿ ಚೆನ್ನಾಗಿ ಬೀಟ್‌ ಮಾಡಿದರೆ ಅದೇ ಮಜ್ಜಿಗೆಯಾಗುತ್ತದೆ. ಇದು ಹೆವಿಯಾಗಿರುವುದಿಲ್ಲ. ಗಟ್ಟಿ ಇರುವುದಿಲ್ಲ. ನೀರಿನಂತೆ ಇರುವ ಕಾರಣ ದೇಹ ತಣ್ಣಗಿರುತ್ತದೆ. ಇದೇ ಮಜ್ಜಿಗೆಯನ್ನು ಚಳಿಗಾಲದಲ್ಲಿ ಕುಡಿದರೆ ಶೀತ ಗ್ಯಾರಂಟಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !