ಬೆಳಿಗ್ಗೆ ಎದ್ದು ಉಪಹಾರ ಬಿಟ್ಟು ನೇರವಾಗಿ ಕೆಲಸಕ್ಕೆ ಅಥವಾ ಜಿಮ್‌ಗೆ ಹೋಗುವ ಅಭ್ಯಾಸ ಹಲವರಲ್ಲಿ ಇದೆ. ಆದರೆ ಫಿಟ್ನೆಸ್ ದೃಷ್ಟಿಯಿಂದ ನೋಡಿದರೆ, ಬೆಳಗಿನ ಉಪಹಾರ ದಿನದ ಅತ್ಯಂತ ಮುಖ್ಯ ಆಹಾರಗಳಲ್ಲಿ ಒಂದಾಗಿದೆ. ದೇಹಕ್ಕೆ ದಿನದ ಮೊದಲ ಶಕ್ತಿ ಇದರ ಮೂಲಕವೇ ಸಿಗೋದು.
ದೇಹಕ್ಕೆ ಮೊದಲ ಎನರ್ಜಿ
ರಾತ್ರಿ ಹಲವು ಗಂಟೆಗಳ ಉಪವಾಸದ ಬಳಿಕ ದೇಹಕ್ಕೆ ಬೆಳಗ್ಗೆ ಶಕ್ತಿ ಅಗತ್ಯವಾಗಿರುತ್ತದೆ. ಈ ಸಮಯದಲ್ಲಿ ಆರೋಗ್ಯಕರ ಉಪಹಾರ ತೆಗೆದುಕೊಂಡರೆ ದೇಹದ ಮೆಟಾಬಾಲಿಸಂ ಸರಿಯಾಗಿ ಕೆಲಸ ಮಾಡಲು ಶುರುವಾಗುತ್ತದೆ.
ವರ್ಕೌಟ್‌ಗೆ ಶಕ್ತಿ ಹೆಚ್ಚಿಸುತ್ತದೆ
ಬೆಳಿಗ್ಗೆ ವ್ಯಾಯಾಮ ಮಾಡುವವರು ಖಾಲಿ ಹೊಟ್ಟೆಗೆ ವರ್ಕೌಟ್ ಮಾಡಿದರೆ ಬೇಗ ದಣಿವು ಕಾಣಿಸಬಹುದು. ಓಟ್ಸ್, ಮೊಟ್ಟೆ, ಹಣ್ಣುಗಳು ಅಥವಾ ಇಡ್ಲಿ ತರಹದ ಹಗುರ ಉಪಹಾರ ದೇಹಕ್ಕೆ ಬೇಕಾದ ಎನರ್ಜಿ ನೀಡುತ್ತದೆ.
ಇದನ್ನೂ ಓದಿ:
ತೂಕ ನಿಯಂತ್ರಣಕ್ಕೆ ಸಹಕಾರಿ
ಉಪಹಾರ ಬಿಟ್ಟರೆ ಮಧ್ಯಾಹ್ನ ಹೆಚ್ಚು ಹಸಿವು ಆಗಿ ಅನಗತ್ಯವಾಗಿ ಹೆಚ್ಚು ಆಹಾರ ತಿನ್ನುವ ಸಾಧ್ಯತೆ ಹೆಚ್ಚುತ್ತದೆ. ಸರಿಯಾದ ಬ್ರೇಕ್‌ಫಾಸ್ಟ್ ದಿನಪೂರ್ತಿ ಹಸಿವು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಪ್ರೋಟೀನ್ ಮುಖ್ಯ
ಫಿಟ್ನೆಸ್ ಗುರಿ ಇದ್ದರೆ ಬೆಳಗಿನ ಉಪಹಾರದಲ್ಲಿ ಪ್ರೋಟೀನ್ ಇರಬೇಕು. ಮೊಟ್ಟೆ, ಮೊಸರು, ಪೀನಟ್ ಬಟರ್ ಅಥವಾ ಸ್ಪ್ರೌಟ್ಸ್ ಉತ್ತಮ ಆಯ್ಕೆ.
ಫಿಟ್ನೆಸ್‌ನಲ್ಲಿ ವರ್ಕೌಟ್ ಎಷ್ಟು ಮುಖ್ಯವೋ, ಅದೇ ಮಟ್ಟಿಗೆ ಬೆಳಗಿನ ಉಪಹಾರವೂ ಮುಖ್ಯ. ದಿನದ ಆರಂಭ ಸರಿಯಾಗಿದ್ದರೆ ಫಲಿತಾಂಶವೂ ಉತ್ತಮವಾಗಿರುತ್ತದೆ.



