April 18, 2026
Saturday, April 18, 2026
spot_img

ಧರ್ಮದ ಆಧಾರಿತ ಮೀಸಲಾತಿ ಅಸಾಧ್ಯ: ಎಸ್‌ಪಿ ಬೇಡಿಕೆಗೆ ಅಮಿತ್ ಶಾ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕದ ಕುರಿತು ನಡೆದ ಚರ್ಚೆಯು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ವಾಗ್ವಾದಕ್ಕೆ ಸಾಕ್ಷಿಯಾಯಿತು. ಮಹಿಳಾ ಮೀಸಲಾತಿಯೊಳಗೆ ಮುಸ್ಲಿಂ ಮಹಿಳೆಯರಿಗೂ ಪ್ರತ್ಯೇಕ ಕೋಟಾ ಕಲ್ಪಿಸಬೇಕೆಂದು ಸಮಾಜವಾದಿ ಪಕ್ಷ ಪಟ್ಟು ಹಿಡಿದರೆ, ಕೇಂದ್ರ ಸರ್ಕಾರ ಇದನ್ನು ಕಟುವಾಗಿ ವಿರೋಧಿಸಿದೆ.

ಚರ್ಚೆಯ ವೇಳೆ ಮಾತನಾಡಿದ ಎಸ್‌ಪಿ ಸಂಸದ ಧರ್ಮೇಂದ್ರ ಯಾದವ್, ಮಹಿಳಾ ಮೀಸಲಾತಿಯಲ್ಲಿ ಮುಸ್ಲಿಂ ಮಹಿಳೆಯರ ಹಿತರಕ್ಷಣೆಗಾಗಿ ಪ್ರತ್ಯೇಕ ಒಳಸಂಚು ಅಥವಾ ಕೋಟಾ ಇರಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ದೇಶದ ಜನಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಗಣನೀಯ ಪ್ರಮಾಣದಲ್ಲಿದ್ದಾರೆ. ಹಾಗಿದ್ದ ಮೇಲೆ ಅವರಿಗೆ ಪ್ರತ್ಯೇಕ ಮೀಸಲಾತಿ ಏಕೆ ನೀಡಬಾರದು?” ಎಂದು ಪ್ರಶ್ನಿಸಿದರು.

ಎಸ್‌ಪಿ ನಾಯಕರ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತದ ಸಂವಿಧಾನವು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. “ಧರ್ಮದ ಹೆಸರಿನಲ್ಲಿ ಕೋಟಾ ನಿಗದಿಪಡಿಸುವುದು ಸಂಪೂರ್ಣವಾಗಿ ಅಸಂವಿಧಾನಿಕ. ಮುಸ್ಲಿಂ ಮಹಿಳೆಯರಿಗೆ ಅಂತಹ ಮೀಸಲಾತಿ ನೀಡುವುದು ಕಾನೂನು ಬಾಹಿರ” ಎಂದು ಅವರು ವಿವರಿಸಿದರು.

ವಿರೋಧ ಪಕ್ಷಗಳು ಕೇವಲ ಮತಬ್ಯಾಂಕ್ ಮತ್ತು ಓಲೈಕೆ ರಾಜಕಾರಣಕ್ಕಾಗಿ ಇಂತಹ ಬೇಡಿಕೆಗಳನ್ನು ಮುಂದಿಡುತ್ತಿವೆ ಎಂದು ಟೀಕಿಸಿದ ಅಮಿತ್ ಶಾ, ಎಸ್‌ಪಿ ನಾಯಕರಿಗೆ ಸವಾಲೊಂದನ್ನು ಎಸೆದರು. “ನಿಮಗೆ ಮುಸ್ಲಿಂ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿಯಿದ್ದರೆ, ನಿಮ್ಮ ಪಕ್ಷದ ಪಾಲಿನ ಎಲ್ಲಾ ಚುನಾವಣಾ ಟಿಕೆಟ್‌ಗಳನ್ನು ಅವರೇ ನೀಡಲಿ. ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ” ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !