April 19, 2026
Sunday, April 19, 2026
spot_img

ಸುನಿಲ್, ವರುಣ್ ಬೌಲಿಂಗ್ ಮೋಡಿಗೆ ರಾಜಸ್ಥಾನ್ ತತ್ತರ: ಕೆಕೆಆರ್ ಗೆಲುವಿಗೆ 156 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಅವರ ಮ್ಯಾಜಿಕ್ ಬೌಲಿಂಗ್ ದಾಳಿಗೆ ರಾಜಸ್ಥಾನ್ ರಾಯಲ್ಸ್ ತತ್ತರಿಸಿದ್ದು, ಕೇವಲ 155 ರನ್​ ಗಳಿಸಿ, ಕೆಕೆಆರ್ ಗೆ ಸುಲಭ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ರಾಜಸ್ಥಾನ್ ತಂಡಕ್ಕೆ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಜೈಸ್ವಾಲ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 81 ರನ್ ಗಳಿಸಿತು. ಆದರೆ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಸೂರ್ಯವಂಶಿ 46 ರನ್​ಗಳಿಸಿ ಔಟ್ ಆದರು.

ಇತ್ತ ವೈಭವ್ ವಿಕೆಟ್ ಬೀಳುತ್ತಿದ್ದಂತೆ ಧ್ರುವ್ ಜುರೆಲ್ ಕೇವಲ 5 ರನ್​ಗಳಿಸಿ ಪೆವಿಲಿಯನ್ ನತ್ತ ಮುಖ ಮಾಡಿದರು. ಇದರ ಬೆನ್ನಲ್ಲೇ 39 ರನ್​ಗಳಿಸಿದ್ದ ಜೈಸ್ವಾಲ್ ಕ್ಯಾಚ್ ನೀಡಿ ಔಟ್ ಆದರು.

ಬಳಿಕ ಬಂದ ನಾಯಕ ರಿಯಾನ್ ಪರಾಗ್​ ಹಾಗೂ ಹೆಟ್ಮೆಯರ್ ರನ್​ಗಳಿಸಲು ಪರದಾಡಿದರು. ಪರಾಗ್ 12 ರನ್​ಗಳಿಸಿ ಬೌಲ್ಡ್ ಆದರು. ಫೆರೇರಾ 7 ರನ್​ಗಳಿಸಿ ನರೈನ್​ಗೆ ವಿಕೆಟ್ ಒಪ್ಪಿಸಿದರು. ಇತ್ತ 15 ರನ್​ಗಳಿಸಿದ್ದ ಹೆಟ್ಮೆಯರ್, 8 ರನ್​ಗಳಿಸಿದ್ದ ಜಡೇಜಾ ಹಾಗೂ ರವಿ ಬಿಷ್ಭೋಯ್​ರನ್ನ ಒಂದೇ ಓವರ್​ನಲ್ಲಿ ಕಾರ್ತಿಕ್ ತ್ಯಾಗಿ ಪೆವಿಲಿಯನ್​​ಗಟ್ಟಿದರು. ಈ ಮೂಲಕ ಆರ್ ಆರ್ ಬ್ಯಾಟಿಂಗ್ ನಲ್ಲಿ ಸಂಪೂರ್ಣ ಎಡವಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !