ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಅವರ ಮ್ಯಾಜಿಕ್ ಬೌಲಿಂಗ್ ದಾಳಿಗೆ ರಾಜಸ್ಥಾನ್ ರಾಯಲ್ಸ್ ತತ್ತರಿಸಿದ್ದು, ಕೇವಲ 155 ರನ್ ಗಳಿಸಿ, ಕೆಕೆಆರ್ ಗೆ ಸುಲಭ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ರಾಜಸ್ಥಾನ್ ತಂಡಕ್ಕೆ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಜೈಸ್ವಾಲ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 81 ರನ್ ಗಳಿಸಿತು. ಆದರೆ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಸೂರ್ಯವಂಶಿ 46 ರನ್ಗಳಿಸಿ ಔಟ್ ಆದರು.
ಇತ್ತ ವೈಭವ್ ವಿಕೆಟ್ ಬೀಳುತ್ತಿದ್ದಂತೆ ಧ್ರುವ್ ಜುರೆಲ್ ಕೇವಲ 5 ರನ್ಗಳಿಸಿ ಪೆವಿಲಿಯನ್ ನತ್ತ ಮುಖ ಮಾಡಿದರು. ಇದರ ಬೆನ್ನಲ್ಲೇ 39 ರನ್ಗಳಿಸಿದ್ದ ಜೈಸ್ವಾಲ್ ಕ್ಯಾಚ್ ನೀಡಿ ಔಟ್ ಆದರು.
ಬಳಿಕ ಬಂದ ನಾಯಕ ರಿಯಾನ್ ಪರಾಗ್ ಹಾಗೂ ಹೆಟ್ಮೆಯರ್ ರನ್ಗಳಿಸಲು ಪರದಾಡಿದರು. ಪರಾಗ್ 12 ರನ್ಗಳಿಸಿ ಬೌಲ್ಡ್ ಆದರು. ಫೆರೇರಾ 7 ರನ್ಗಳಿಸಿ ನರೈನ್ಗೆ ವಿಕೆಟ್ ಒಪ್ಪಿಸಿದರು. ಇತ್ತ 15 ರನ್ಗಳಿಸಿದ್ದ ಹೆಟ್ಮೆಯರ್, 8 ರನ್ಗಳಿಸಿದ್ದ ಜಡೇಜಾ ಹಾಗೂ ರವಿ ಬಿಷ್ಭೋಯ್ರನ್ನ ಒಂದೇ ಓವರ್ನಲ್ಲಿ ಕಾರ್ತಿಕ್ ತ್ಯಾಗಿ ಪೆವಿಲಿಯನ್ಗಟ್ಟಿದರು. ಈ ಮೂಲಕ ಆರ್ ಆರ್ ಬ್ಯಾಟಿಂಗ್ ನಲ್ಲಿ ಸಂಪೂರ್ಣ ಎಡವಿತು.



