September 14, 2026
Monday, September 14, 2026
spot_img

HAIRCARE | ಸಮ್ಮರ್‌ನಲ್ಲಿ ಕೂದಲಿಗೆ ಬೇಕು ಸ್ಪೆಷಲ್‌ ಟ್ರೀಟ್‌ಮೆಂಟ್‌, ಯಾವ ರೀತಿ?

ಬೇಸಿಗೆಯೇನೋ ಮುಗಿದುಹೋಗುತ್ತದೆ. ಆದರೆ ನಿಮ್ಮ ಕೂದಲು ಉದುರಿಗೋಗದಿರಲಿ. ಬೇಸಿಗೆಯ ಝಳಕ್ಕೆ ಕೂದಲಿಗೆ ನಾನಾ ತೊಂದರೆಗಳು ಆಗುತ್ತವೆ. ಅದನ್ನು ನೀವು ಗಮನಿಸಿ ಆರೈಕೆ ಮಾಡಬೇಕಾಗುತ್ತದೆ. ಏನೆಲ್ಲಾ ಮಾಡಬಹುದು? ಟಿಪ್ಸ್‌ ಇಲ್ಲಿದೆ..

ಬಿಸಿಲಿನಲ್ಲಿ ಹೊರಗೆ ಹೋಗಲೇಬೇಕು ಅನ್ನೋದಾದ್ರೆ ಹೇರ್‌ ಸೆರಮ್‌ ಅಥವಾ ಎಸ್‌ಪಿಎಫ್‌ ಇರುವ ಸ್ಪ್ರೇ ಹೊಡೆದುಕೊಳ್ಳಿ.

ನರಿಶಿಂಗ್‌ ಆಗುವ ಹೇರ್‌ ಮಾಸ್ಕ್‌ ಹಾಕಿಕೊಳ್ಳಿ. ಡೀಪ್‌ ಕಂಡೀಷನಿಂಗ್‌ ವಾರಕ್ಕೆಮ್ಮೊಯಾದ್ರೂ ಮಾಡಿ. ಕೂದಲಿಗೆ ಎಣ್ಣೆ ಹಚ್ಚೋದು ತಪ್ಪಿಸಬೇಡಿ.

ಸ್ಕ್ರಾರ್ಫ್‌, ಹ್ಯಾಟ್‌, ಹೆಲ್ಮೆಟ್‌, ಧರಿಸದೇ ಬಿಸಿಲಿನಲ್ಲಿ ಓಡಾಟ ಬೇಡ.

ಜಿಮ್‌ ಅಥವಾ ಸ್ವಿಮ್ಮಿಂಗ್‌ ಹೋದರೆ ಕೂದಲನ್ನು ಒಣಗಿಸಿ ಎಣ್ಣೆ ಹಚ್ಚಿ ಫ್ರೆಶ್‌ ಆಗಿ ಸ್ನಾನ ಮಾಡಿ.

ಈ ಸೀಸನ್‌ನಲ್ಲಿ ನಿಮಗೆ ಹೀಟ್‌, ಸ್ಟೈಲಿಂಗ್‌ ಅವಶ್ಯಕತೆ ಇರೋದಿಲ್ಲ. ಬ್ಲೋ ಡ್ರೈಯರ್ಸ್‌, ಫ್ಲಾಟ್‌ ಐರನ್‌ಗಳನ್ನು ಬಳಸಬೇಡಿ.

ಕೂದಲನ್ನು ಎರಡು ತಿಂಗಳಿಗೊಮ್ಮೆ ಟ್ರಿಮ್‌ ಮಾಡಿ. ಬೇಸಿಗೆಯ ಡ್ರೈನೆಸ್‌ ಹೋಗಲಾಡಿಸಿ.

ಏನು ಮಾಡಬಹುದು?

ರೋಸ್‌ ವಾಟರ್‌, ಅಲೋವೆರಾ ಅಥವಾ ಗೋಂದಿನ ಹೇರ್‌ ಮಾಸ್ಕ್‌ ತಯಾರಿಸಿ ಹಚ್ಚಿಕೊಳ್ಳಿ.

ಬುಡಕ್ಕೆ ಕೊಬ್ಬರಿ ಎಣ್ಣೆ, ಆಪಲ್‌ ಸೈಡರ್‌ ವಿನೇಗರ್‌ ಹಾಕಿ

ರಾತ್ರಿ ಮಲಗುವಾಗ ಲೂಸ್‌ ಆಗಿ ಜಡೆ ಹಾಕಿ, ಸಿಲ್ಕ್‌ ಪಿಲ್ಲೋ ಕೇಸ್‌ ಬಳಸಿ.

ಹೈಡ್ರೇಟ್‌ ಆಗಿರಿ. ದಿನಕ್ಕೆ ಮೂರರಿಂದ ನಾಲ್ಕು ಲೀಟರ್‌ ನೀರನ್ನು ಸೇವಿಸಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !