September 12, 2026
Saturday, September 12, 2026
spot_img

ಜನರೇ ಎಚ್ಚರ, ಇನ್ನೊಂದು ವಾರದಲ್ಲಿ ಅತಿಯಾಗಲಿದೆ ಬಿಸಿಲು ಆರೋಗ್ಯ ಜೋಪಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೇಸಿಗೆ ಕಾಲ ಮುಗಿದುಹೋಗ್ಲಿ ಅಂತ ದಿನ ಎಣಿಸುತ್ತಿರುವ ಜನರಿಗೆ ಇನ್ನೂ ಒಂದು ವಾರ ಈಗಿರುವುದಕ್ಕಿಂತ ಅತಿಯಾದ ಬಿಸಿಲು ಕಾಡಲಿದೆ.

ಇಡೀ ರಾಜ್ಯವೇ ಬಿಸಿಲಿನಿಂದ ಕುದಿಯಲಿದ್ದು, ಆರೋಗ್ಯದ ಕಡೆ ಗಮನಹರಿಸುವುದು ಅತ್ಯಾವಶ್ಯವಾಗಿದೆ. ಬೆಳಗ್ಗೆ ಆದಷ್ಟು ಮನೆ ಅಥವಾ ಬಿಸಿಲು ಬರುವ ಮುನ್ನವೇ ಕಚೇರಿ ಸೇರುವುದು ಉತ್ತಮವಾಗಿದೆ.

ಹವಾಮಾನ ಇಲಾಖೆಯ ವಿಜ್ಞಾನಿ ಸಿ.ಎಸ್‌. ಪಾಟೀಲ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಇಲ್ಲಿಯವರೆಗೂ ಜನ ಕಂಡದ್ದು ಬಿಸಿಲೇ ಇಲ್ಲ, ಇನ್ನೂ ಅತಿಯಾದ ಬಿಸಿಲನ್ನು ಒಂದು ವಾರದಲ್ಲಿ ಕಾಣಬೇಕಾಗುತ್ತದೆ ಎಂದಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 41 ಡಿಗ್ರಿಯಷ್ಟು ಉಷ್ಣಾಂಶವಿದೆ. ಇದನ್ನು ತಡೆದುಕೊಳ್ಳಲಾರದೆ ಜನ ಹೈರಾಣಾಗಿದ್ದಾರೆ. ಆದರೆ ಇನ್ನಷ್ಟು ಬಿಸಿಲನ್ನು ಮುಂದೆ ಅನುಭವಿಸಬೇಕಾಗುತ್ತದೆ. ಬರೀ ಹಗಲು ಅಷ್ಟೇ ಅಲ್ಲ, ರಾತ್ರಿಯೂ ಸೆಕೆ ಹೆಚ್ಚಿರಲಿದ್ದು, ನೆಮ್ಮದಿಯ ನಿದ್ದೆಯೂ ಕಷ್ಟವೇ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !