October 10, 2026
Saturday, October 10, 2026
spot_img

ಅಭಿಷೇಕ್ ಶತಕದಾಟಕ್ಕೆ ಡೆಲ್ಲಿ ಬೌಲರ್​​​ಗಳು ಸುಸ್ತು: ಅಕ್ಷರ್ ಬಳಗಕ್ಕೆ ಬಿಗ್ ಟಾರ್ಗೆಟ್ ನೀಡಿದ ಹೈದರಾಬಾದ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಭಿಷೇಕ್ ಶರ್ಮಾ ಸ್ಫೋಟಕ ಶತಕದಾಟದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್​​ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿ, ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಬೃಹತ್ ಮೊತ್ತದ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದರಾಬಾದ್ ತಂಡಕ್ಕೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಉತ್ತಮ ಆರಂಭ ನೀಡಿದರು. ಹೆಡ್ 37 ರನ್‌ಗಳಿಗೆ ಔಟಾದರು. ಆದರೆ ಮತ್ತೊಂದೆಡೆ ಬೌಂಡರಿ ಮತ್ತು ಸಿಕ್ಸರ್‌ ಗಳ ಸುರಿಮಳೆ ಸುರಿಸುತ್ತಿದ್ದ ಅಭಿಷೇಕ್ ಶರ್ಮಾ ಕೇವಲ 47 ಎಸೆತಗಳಲ್ಲಿ ಶತಕ ಗಳಿಸಿ ಮಿಂಚಿದರು.

ನಾಯಕ ಇಶಾನ್ ಕಿಶನ್ 25 ರನ್​ಗಳಿಸಿ ರನೌಟಾದರೆ, ಕೊನೆಯಲ್ಲಿ ಹೆನ್ರಿಕ್ ಕ್ಲಾಸೆನ್ ಕೇವಲ 13 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದರು. ಇತ್ತ ಶತಕದ ಬಳಿಕವೂ ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿ ಕೇವಲ 68 ಎಸೆತಗಳಲ್ಲಿ ಅಜೇಯ 135 ರನ್ ಗಳಿಸಿದರು.

Must Read