May 17, 2026
Sunday, May 17, 2026
spot_img

CINE | 63ರ ಹರೆಯದಲ್ಲೂ ಏನ್ ಜೋಶ್: OTTಯಲ್ಲಿ ಧೂಳೆಬ್ಬಿಸುತ್ತಿದೆ ಮಹಿಳಾ ಪ್ರಧಾನ ಸಿನಿಮಾ ‘ತೈ ಕಿಳಾವಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ದೊಡ್ಡ ಮಟ್ಟದ ಕಲೆಕ್ಷನ್ ಮಾಡಲಾರವು ಎಂಬ ಹಳೆಯ ಧಾರಣೆ ಮತ್ತೆ ತಪ್ಪಾಗಿದೆ. ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅಭಿನಯದ ತೈ ಕಿಳಾವಿ ಸಿನಿಮಾ ಅದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಕೇವಲ 9 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿತವಾದ ಈ ಸಿನಿಮಾ, ಅಂತಿಮವಾಗಿ ಸುಮಾರು 80 ಕೋಟಿ ರೂಪಾಯಿ ಗಳಿಸಿ ಭಾರೀ ಯಶಸ್ಸು ಸಾಧಿಸಿದೆ. ಕಥೆಯ ಬಲ ಮತ್ತು ವಿಭಿನ್ನ ನಿರೂಪಣೆಯ ಮೂಲಕ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಮಧುರೈ ಹಿನ್ನೆಲೆಯಲ್ಲಿರುವ ಕಥೆಯಲ್ಲಿ ರಾಧಿಕಾ ಅವರು ‘ಪವುನುತೈ’ ಎಂಬ ವೃದ್ಧೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:

ಈ ಪಾತ್ರಕ್ಕಾಗಿ ಅವರು ಸಂಪೂರ್ಣವಾಗಿ ಮೇಕ್‌ಓವರ್ ಮಾಡಿಕೊಂಡಿದ್ದು, ಪ್ರಾಸ್ಥೆಟಿಕ್ ಮೇಕಪ್ ಮೂಲಕ ಹಳ್ಳಿಯ ವಯಸ್ಸಾದ ಮಹಿಳೆಯಾಗಿ ತೋರ್ಪಡಿಸಿದ್ದಾರೆ. ಸಾಮಾನ್ಯವಾಗಿ ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅವರು, ಈ ಚಿತ್ರದಲ್ಲಿ ಸಂಪೂರ್ಣ ವಿಭಿನ್ನವಾಗಿ ಮೂಡಿ ಬಂದಿದ್ದಾರೆ.

ಚಿತ್ರದ ಕಥೆ ಹಣ ಮತ್ತು ಸಂಬಂಧಗಳ ನಡುವಿನ ನಿಜವಾದ ಮುಖವನ್ನು ತೋರಿಸುತ್ತದೆ. ಸಾಲ ವ್ಯವಹಾರ ನಡೆಸುವ ಕಟ್ಟುನಿಟ್ಟಿನ ಮಹಿಳೆ ಅನಾರೋಗ್ಯಕ್ಕೆ ಒಳಗಾದ ಬಳಿಕ, ಆಕೆಯ ಸಂಪತ್ತಿಗಾಗಿ ಕುಟುಂಬದವರ ವರ್ತನೆ ಹೇಗೆ ಬದಲಾಗುತ್ತದೆ ಎಂಬುದನ್ನು ಚಿತ್ರ ಪರಿಣಾಮಕಾರಿಯಾಗಿ ಹೇಳುತ್ತದೆ. ನಿರ್ದೇಶಕ ಶಿವಕುಮಾರ್ ಮುರುಗೇಶನ್ ಈ ವಿಷಯವನ್ನು ಸೂಕ್ಷ್ಮವಾಗಿ ಮೂಡಿಸಿದ್ದಾರೆ.

ಈ ಸಿನಿಮಾ ಈಗ JioHotstar ನಲ್ಲಿ ಲಭ್ಯವಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !