May 17, 2026
Sunday, May 17, 2026
spot_img

Mango Peel Glow | ಮಾವಿನ ಹಣ್ಣಿನ ಸಿಪ್ಪೆ ಬಿಸಾಡ್ಬೇಡಿ, ಅದ್ರಿಂದಲೇ ನಿಮ್ಮ ಮುಖ ಮಿನುಗೋದು ಗೊತ್ತಾ?

ಮಾವು ತಿನ್ನಿದ ಮೇಲೆ ಅದರ ಸಿಪ್ಪೆಯನ್ನು ಸಾಮಾನ್ಯವಾಗಿ ಕಸದ ಬುಟ್ಟಿಗೆ ಹಾಕುತ್ತೇವೆ. ಆದರೆ ಅದೇ ಸಿಪ್ಪೆಯಲ್ಲಿ ನಿಮ್ಮ ಚರ್ಮವನ್ನು ಮಿನುಗಿಸುವ ನೈಸರ್ಗಿಕ ಗುಣಗಳಿವೆ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ. ಮಾವಿನ ಸಿಪ್ಪೆ ವಿಟಮಿನ್ C, ಆಂಟಿ ಆಕ್ಸಿಡೆಂಟ್ಸ್ ಮತ್ತು ಚರ್ಮಕ್ಕೆ ಪೋಷಕಾಂಶಗಳನ್ನು ನೀಡುವ ಅಂಶಗಳಿಂದ ತುಂಬಿರುತ್ತದೆ.

ಮಾವಿನ ಸಿಪ್ಪೆಯನ್ನು ಮುಖದ ಮೇಲೆ ಹಚ್ಚುವುದರಿಂದ ಟ್ಯಾನ್ ಕಡಿಮೆಯಾಗಲು ಸಹಾಯವಾಗುತ್ತದೆ. ಸೂರ್ಯನ ಕಿರಣಗಳಿಂದ ಕಪ್ಪಾಗಿರುವ ಚರ್ಮಕ್ಕೆ ಇದು ಸ್ವಾಭಾವಿಕ ಬ್ಲೀಚ್ ಆಗಿ ಕೆಲಸ ಮಾಡುತ್ತದೆ.

ಸಿಪ್ಪೆಯನ್ನು ನೇರವಾಗಿ ಮುಖಕ್ಕೆ ಸವರುದು 10-15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಬಹುದು. ಇದರಿಂದ ಚರ್ಮ ತಾಜಾ ಮತ್ತು ಹೊಳಪಾಗುತ್ತದೆ.

ಇದನ್ನೂ ಓದಿ:

ಇನ್ನು ಮೊಡವೆ ಸಮಸ್ಯೆ ಇರುವವರಿಗೆ ಕೂಡ ಮಾವಿನ ಸಿಪ್ಪೆ ಉಪಯುಕ್ತ. ಇದರಲ್ಲಿ ಇರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮದ ಸೋಂಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಸಿಪ್ಪೆಯನ್ನು ಪೇಸ್ಟ್ ಮಾಡಿ ಸ್ವಲ್ಪ ಅರಿಶಿನ ಸೇರಿಸಿ ಹಚ್ಚಿದರೆ ಮೊಡವೆಗಳು ನಿಧಾನವಾಗಿ ಕಡಿಮೆಯಾಗುತ್ತವೆ.

ಮಾವಿನ ಸಿಪ್ಪೆ ಡೆಡ್ ಸ್ಕಿನ್ ತೆಗೆದುಹಾಕುವ ಸ್ಕ್ರಬ್ ಆಗಿಯೂ ಕೆಲಸ ಮಾಡುತ್ತದೆ. ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ, ಅದಕ್ಕೆ ಸ್ವಲ್ಪ ಹಾಲು ಅಥವಾ ಮೊಸರು ಸೇರಿಸಿ ಸ್ಕ್ರಬ್ ಮಾಡಿದರೆ ಚರ್ಮ ಮೃದುವಾಗುತ್ತದೆ.

ರಾಸಾಯನಿಕ ಉತ್ಪನ್ನಗಳ ಬದಲು ಇಂತಹ ನೈಸರ್ಗಿಕ ವಿಧಾನಗಳನ್ನು ಬಳಸಿದರೆ ಚರ್ಮ ಆರೋಗ್ಯಕರವಾಗಿರುತ್ತದೆ. ಮುಂದಿನ ಬಾರಿ ಮಾವು ತಿನ್ನುವಾಗ ಸಿಪ್ಪೆಯನ್ನು ಬಿಸಾಡುವ ಮುನ್ನ, ಅದನ್ನು ನಿಮ್ಮ ಸ್ಕಿನ್ ಕೇರ್ ರೂಟೀನ್‌ನಲ್ಲಿ ಒಮ್ಮೆ ಟ್ರೈ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !