April 25, 2026
Saturday, April 25, 2026
spot_img

ಬೆತ್ತಲೆ ಫೋಟೋ ಕಳಿಸು ಅಂತ ಅಕ್ಷಯ್ ಕುಮಾರ್ ಪುತ್ರಿಗೆ ಕಿರುಕುಳ: ಆರೋಪಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಅಕ್ಷಯ್ ಕುಮಾರ್ ಪುತ್ರಿಯನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ಮೂಲಕ ಅಶ್ಲೀಲ ಬೇಡಿಕೆ ಇಟ್ಟ ಪ್ರಕರಣದಲ್ಲಿ ಮಹಾರಾಷ್ಟ್ರ ಸೈಬರ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಪ್ರಾಪ್ತೆಯೊಂದಿಗೆ ಗೇಮ್ ಮೂಲಕ ಸಂಪರ್ಕ ಸಾಧಿಸಿದ್ದ ವ್ಯಕ್ತಿ, ಮಾತುಕತೆಯ ನಡುವೆ ಅಸಭ್ಯವಾಗಿ ವರ್ತಿಸಿ ಖಾಸಗಿ ಫೋಟೋಗಳನ್ನು ಕೇಳಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಸೈಬರ್ ಅಧಿಕಾರಿಗಳು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಕ್ಷಯ್ ಕುಮಾರ್ ಅವರ 13 ರ್ಷದ ಮಗಳು ಆನ್‌ಲೈನ್ ಗೇಮ್ ಆಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಂದಿಗೆ ಮಾತುಕತೆ ಆರಂಭವಾಗಿ, ಬಳಿಕ ಅದು ಅಸಭ್ಯ ಸಂದೇಶಗಳಿಗೆ ತಿರುಗಿತ್ತು. ಗೇಮ್ ಆಡುತ್ತಿದ್ದಾಗ ಆರೋಪಿ ಬೆತ್ತಲೆ ಫೋಟೋಗಳನ್ನು ಕೇಳಿದ್ದ ಎನ್ನಲಾಗಿದೆ.

ಇದನ್ನೂ ಓದಿ:

ಈ ಘಟನೆ ಬಗ್ಗೆ ಅಕ್ಷಯ್ ಕುಮಾರ್ ಹಿಂದೆಯೇ ಜಾಗೃತಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಡಿಜಿಟಲ್ ಜಗತ್ತಿನಲ್ಲಿ ಮಕ್ಕಳ ಸುರಕ್ಷತೆ ಕುರಿತು ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದ್ದರು. ಈ ಘಟನೆ ಸೈಬರ್ ಅಪರಾಧದ ಹೆಚ್ಚುತ್ತಿರುವ ಅಪಾಯದತ್ತ ಮತ್ತೊಮ್ಮೆ ಗಮನ ಸೆಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !