April 27, 2026
Monday, April 27, 2026
spot_img

ಪಂಜಾಬ್ ಸರ್ಕಾರ ಭದ್ರತೆ ಹಿಂಪಡೆದ್ರೆ ಏನಾಯ್ತು..! ಕೇಂದ್ರದಿಂದ ಹರ್ಭಜನ್ ಸಿಂಗ್‌ಗೆ ಸಿಕ್ತು CRPF ಸೆಕ್ಯೂರಿಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ನಂತರ ಪಂಜಾಬ್‌ನಲ್ಲಿ ರಾಜಕೀಯ ಚರ್ಚೆಗಳು ತೀವ್ರಗೊಂಡಿದ್ದು, ಭದ್ರತಾ ವಿಚಾರವೂ ಗಮನ ಸೆಳೆದಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಹರ್ಭಜನ್ ಸಿಂಗ್ ಅವರಿಗೆ ಸಿಆರ್‌ಪಿಎಫ್ ಭದ್ರತೆ ಒದಗಿಸಿದೆ.

ಹರ್ಭಜನ್ ಸಿಂಗ್ ಅವರ ಜಲಂಧರ್ ನಿವಾಸದ ಹೊರಗೆ ಎಎಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿ ನಡೆದ ಪ್ರತಿಭಟನೆಗಳು ಭದ್ರತಾ ಕಳವಳ ಹೆಚ್ಚಿಸಿವೆ. ಇದರ ಬೆನ್ನಲ್ಲೇ ಅವರ ನಿವಾಸದ ಬಳಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ:

ಇದಕ್ಕೂ ಮೊದಲು ಹರ್ಭಜನ್‌ಗೆ ಪಂಜಾಬ್ ಪೊಲೀಸ್ ಭದ್ರತೆ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಆ ಭದ್ರತೆಯನ್ನು ಹಿಂಪಡೆಯಲಾಗಿದೆ ಎನ್ನಲಾಗಿದೆ. ಈ ಬೆಳವಣಿಗೆಯ ಬಳಿಕ ಕೇಂದ್ರ ಭದ್ರತೆ ಒದಗಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮೂಲಗಳ ಪ್ರಕಾರ, ಮುಂದಿನ ದಿನಗಳಲ್ಲಿ ದೆಹಲಿ ಹಾಗೂ ಪಂಜಾಬ್ ಎರಡೂ ಕಡೆ ಹರ್ಭಜನ್ ಸಿಂಗ್‌ಗೆ ಸಿಆರ್‌ಪಿಎಫ್ ಭದ್ರತೆ ಮುಂದುವರಿಯಲಿದೆ. ಈ ಬೆಳವಣಿಗೆ ಪಂಜಾಬ್ ರಾಜಕೀಯಕ್ಕೆ ಹೊಸ ತಿರುವು ನೀಡುವ ಸೂಚನೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !