October 10, 2026
Saturday, October 10, 2026
spot_img

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ: ಮತ್ತೆ ಹಳೆ ರಾಗ ಹಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಇನ್ನೂ ಒಂದು ನಿರ್ಧಿಷ್ಟ ತಾರ್ಕಿಕ ಅಂತ್ಯ ಸಿಗದಿದ್ದರೂ, ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮತ್ತೊಮ್ಮೆ ಹಳೆ ರಾಗವನ್ನೇ ಹೇಳುವ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ್ದಾರೆ.

ಈ ಕುರಿತು ಶ್ವೇತಭವನದಲ್ಲಿ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕುವ ವೇಳೆ ಮಾತನಾಡಿದ ಟ್ರಂಪ್, ಯುದ್ಧ ನಿಲ್ಲಿಸದಿದ್ದರೆ ನಾನು ಎರಡೂ ದೇಶಗಳಿಗೆ ಶೇಕಡಾ 200 ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದೆ.ಹಾಗಾಗಿ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು ಎಂದು ಹೇಳಿದ್ದಾರೆ.

ಎರಡು ದೇಶಗಳು ಯುದ್ಧ ಮಾಡಲು ಸಿದ್ಧರಾಗಿದ್ದರು. ಈ ವೇಳೆ ನಾನು ಹೆಚ್ಚಿನ ತೆರಿಗೆ ಹೇರುವ ಬೆದರಿಕೆ ಹಾಕಿ ಯುದ್ಧ ತಪ್ಪಿಸಿದೆ. ಇದರಿಂದ ದೊಡ್ಡ ಒಳಿತು ಆಗಿದ್ದು, ಸುಮಾರು 3 ರಿಂದ 5 ಕೋಟಿ ಜನರ ಪ್ರಾಣ ಉಳಿದಿದೆ ಮತ್ತು ಅಣ್ವಸ್ತ್ರ ಯುದ್ಧ ತಪ್ಪಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಟ್ರಂಪ್ ಹೇಳಿಕೆಯನ್ನು ಭಾರತ ನಿರಾಕರಿಸಿದ್ದರೂ, ಟ್ರಂಪ್ ಅವರು ತಮ್ಮ ಹೇಳಿಕೆಯನ್ನು ಪುನರುಚ್ಛರಿಸುತ್ತಲೇ ಇದ್ದಾರೆ.

Must Read