May 2, 2026
Saturday, May 2, 2026
spot_img

FOOD | ಬೀನ್ಸ್‌ ಪಲ್ಯ ತಿಂದು ಬೇಜಾಗಿರಾದೆಯೇ? ಹಾಗಿದ್ರೆ ಈ ಕಾಯಿರಸ ಟ್ರೈ ಮಾಡಿ

ಬೀನ್ಸ್‌ ಕಾಯಿರಸ ಎನ್ನುವುದು ದಕ್ಷಿಣ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಮಲೆನಾಡು ಮತ್ತು ಹಳೆ ಮೈಸೂರು ಭಾಗದ ಒಂದು ಸಾಂಪ್ರದಾಯಿಕ ಅಡುಗೆಯಾಗಿದೆ. ಇದು ಹುಳಿ, ಸಿಹಿ ಮತ್ತು ಖಾರದದಿಂದ ಕೂಡಿದ್ದು, ಅನ್ನದ ಜೊತೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ.

ಕಾಯಿರಸಕ್ಕೆ ಬೇಕಾಗುವ ಸಾಮಗ್ರಿಗಳು
ಬೀನ್ಸ್
ತೆಂಗಿನ ಕಾಯಿ
ಹುಣಸೆ ಹಣ್ಣು
ಬೆಲ್ಲ
ಉಪ್ಪು
ಕಡಲೆಬೇಳೆ
ಉದ್ದಿನಬೇಳೆ
ಕೊತ್ತಂಬರಿ
ಜೀರಿಗೆ
ಒಣ ಮೆಣಸು
ಕರಿಬೇವು
ಎಳ್ಳು

ಮಾಡುವ ವಿಧಾನ
ಮೊದಲು ಕತ್ತರಿಸಿದ ಬೀನ್ಸ್‌ಗೆ ಉಪ್ಪು ಮತ್ತು ನೀರು ಸೇರಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ, ಜೀರಿಗೆ, ಒಣ ಮೆಣಸು, ಎಳ್ಳನ್ನು ಕೆಂಪಾಗುವವರೆಗು ಹುರಿದುಕೊಂಡು, ,ಅದು ತಣ್ಣಗಾದ ನಂತರ ಆ ಮಸಾಲೆಯನ್ನು ರುಬ್ಬಿಕೊಳ್ಳಬೇಕು. ಬಳಿಕ ಬೇಯಿಸಿದ ಬೀನ್ಸ್‌ಗೆ ಮಸಾಲೆ, ಹುಣಸೆರಸ ಮತ್ತು ಬೆಲ್ಲ ಹಾಗೂ ಅಗತ್ಯವಿದ್ದರೆ ಸ್ವಲ್ಪ ನೀರನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಕುದಿಸಿ, ಕೊನೆಯಲ್ಲಿ ಸಾಸಿವೆ, ಕೆರಿಬೇವು ಮತ್ತು ಇಂಗನ್ನು ಹಾಕಿ ಒಗ್ಗರಣೆ ಕೊಟ್ಟರೆ ಘಮಘಮಿಸುವ ಬೀನ್ಸ್‌ ಕಾಯಿರಸ ಸವಿಯಲು ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !