May 2, 2026
Saturday, May 2, 2026
spot_img

CINE | ಫೋಟೊ ಲೀಕ್‌ ಮಾಡ್ಬೇಡಿ, ಸಿನಿಮಾ ಥ್ರಿಲ್‌ ಸಿಗೋದಿಲ್ಲ ಎಂದು ಮನವಿ ಮಾಡಿದ ʼಕಿಂಗ್‌ʼ ಡೈರೆಕ್ಟರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

‘ಪಠಾಣ್’ ಅಂತಹ ಯಶಸ್ವಿ ಚಿತ್ರಗಳ ನಂತರ ಜನಪ್ರಿಯ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರ ಮುಂದಿನ ಬಹು ನೀರೀಕ್ಷೆಯ ಸಿನಿಮಾ ‘ಕಿಂಗ್’. ಇದರಲ್ಲಿ ಶಾರುಖ್ ಖಾನ್ ನಾಯಕನಾಗಿ ನಟಿಸುತ್ತಿದ್ದು, ಅದೇ ರೀತಿ ದೀಪಿಕಾ ಪಡುಕೋಣೆ ಮತ್ತು ಸುಹಾನಾ ಖಾನ್ ಕೂಡ ನಟಿಸುತ್ತಿದ್ದಾರೆ. ಹಾಗಾಗಿ ಈ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ಈ ಸಂಧರ್ಭದಲ್ಲಿ ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ಫೋಟೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಈ ಬಗ್ಗೆ ನಿರ್ದೇಶಕ ಸಿದ್ದಾರ್ಥ್ ಆನಂದ್ ತೀವ್ರವಾಗಿ ಖಂಡಿಸಿದ್ದಾರೆ.

ಕೇಪ್ ಟೌನ್‌ನಿಂದ ಲೀಕ್‌ ಆದ ಫೋಟೋಗಳ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಕಳವಳ ವ್ಯಕ್ತಪಡಿಸಿರುವ ಸಿದ್ದಾರ್ಥ್ ಆನಂದ್, ಚಿತ್ರದ ಪೋಸ್ಟರ್ ಹಂಚಿಕೊಳ್ಳುತ್ತಾ ಹೀಗೆ ಬರೆದಿದ್ದಾರೆ: “ಎಲ್ಲಾ ಅಭಿಮಾನಿಗಳಲ್ಲಿ ಒಂದು ವಿನಂತಿ. ದಯವಿಟ್ಟು ‘ಕಿಂಗ್’ ಚಿತ್ರದ ಸೆಟ್‌ನಿಂದ ಸೋರಿಕೆಯಾದ ಯಾವುದೇ ಫೋಟೋ ಅಥವಾ ವಿಡಿಯೋಗಳನ್ನು ಪೋಸ್ಟ್ ಮಾಡಬೇಡಿ. ಎಲ್ಲರಿಗೂ ಅತ್ಯುತ್ತಮ ಸಿನಿಮೀಯ ಅನುಭವವನ್ನು ನೀಡಲು ತಂಡವು ಹಗಲಿರುಳು ಶ್ರಮಿಸುತ್ತಿದೆ. ಚಿತ್ರತಂಡವು ಯೋಜಿಸಿದಂತೆ ಅಧಿಕೃತವಾಗಿ ಮಾಹಿತಿಯನ್ನು ಹೊರಹಾಕುವವರೆಗೆ ಕಾಯಿರಿ, ದೊಡ್ಡ ಪರದೆಯ ಮೇಲಿನ ಸರ್ಪ್ರೈಸ್‌ಗಾಗಿ ಕಾಯೋಣ. ನಿಮ್ಮ ಪ್ರೀತಿ, ಬೆಂಬಲ ಮತ್ತು ಸಹಕಾರಕ್ಕೆ ಧನ್ಯವಾದಗಳು. ಎಂದು ಬರೆದುಕೊಂಡಿದ್ದಾರೆ.

ಡಿಸೆಂಬರ್ 24ಕ್ಕೆ ಕಿಂಗ್‌ ರಿಲೀಸ್
ಕ್ರಿಸ್‌ಮಸ್ ರಜೆ ಮತ್ತು ವರ್ಷಾಂತ್ಯವನ್ನು ಗುರಿಯಾಗಿಸಿಕೊಂಡ ‘ಕಿಂಗ್’ ಚಿತ್ರವು ಡಿಸೆಂಬರ್ 24, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ಜಾಕಿ ಶ್ರಾಫ್, ಅರ್ಷದ್ ವಾರ್ಸಿ ಮತ್ತು ರಾಣಿ ಮುಖರ್ಜಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಮುಂಬೈ, ಬರ್ಲಿನ್, ಪ್ರಾಗ್, ಬುಡಾಪೆಸ್ಟ್ ಮತ್ತು ವಾರ್ಸಾದಲ್ಲಿ ಚಿತ್ರೀಕರಣವನ್ನು ಚಿತ್ರತಂಡ ಪೂರೈಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !