May 4, 2026
Monday, May 4, 2026
spot_img

ಪಲ್ಯ, ಗ್ರೇವಿ & More 78 | ಬಿಸಿಲಿನ ಧಗೆಗೆ ದೇಹವನ್ನು ತಂಪು ಮಾಡೋ ಮೆಂತ್ಯೆಸೊಪ್ಪಿನ ಡ್ರೈ ಪಲ್ಯ

ಮೆಂತ್ಯೆ ಕಾಳನ್ನು ನಾವು ನಮ್ಮ ದಿನನಿತ್ಯದ ಅಡುಗೆಗಳಲ್ಲಿ ಬಳಕೆಮಾಡುತ್ತೇವೆ. ಮೆಂತ್ಯೆ ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಅಲ್ಲದೆ ತಲೆಹೊಟ್ಟು, ಕೂದಲು ಉದುರುವುದು, ಇತ್ಯಾದಿ ತೊಂದರೆಗಳನ್ನೂ ಅದು ನಿವಾರಣೆ ಮಾಡುತ್ತದೆ. ಅದೇ ರೀತಿ ಮೆಂತ್ಯೆ ಸೊಪ್ಪು ಕೂಡ ನಮ್ಮ ಆರೋಗ್ಯಕ್ಕೆ ಹೆಚ್ಚಿನ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಇದನ್ನು ರೊಟ್ಟಿ, ಚಪಾತಿ, ಅನ್ನದ ಜೊತೆ ಸವಿಯಬಹುದು.

ಬೇಕಾಗುವ ಸಾಮಗ್ರಿಗಳು:
ಮೆಂತ್ಯೆ ಸೊಪ್ಪು
ಉದ್ದಿನಬೇಳೆ –
ಸಾಸಿವೆ
ಚಿಟಿಕೆ ಇಂಗು
ಸಾಂಬಾರ್‌ ಪೌಡರ್
ಸಕ್ಕರೆ
ಆಮ್ ಚೂರ್ ಪೌಡರ್ –
ಉಪ್ಪು
ತೆಂಗಿನತುರಿ
ಎಣ್ಣೆ

ತಯಾರಿಸುವ ವಿಧಾನ:
ಮೆಂತ್ಯೆ ಸೊಪ್ಪನ್ನು ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಉದ್ದಿನಬೇಳೆ, ಸಾಸಿವೆ, ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ಬಳಿಕ ಸಾಂಬಾರ್ ಪೌಡರ್ ಸೇರಿಸಿ ಒಮ್ಮೆ ಕೈಯಾಡಿಸಿ. ಜೊತೆಗೆ ಹೆಚ್ಚಿಟ್ಟ ಮೆಂತ್ಯೆ ಸೊಪ್ಪನ್ನು ಸೇರಿಸಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಆಮ್ ಚೂರ್ ಪೌಡರ್ ಸೇರಿಸಿ ಮಿಕ್ಸ್ ಮಾಡಿ. ಬಾಣಲೆಯ ಮುಚ್ಚಳವನ್ನು ಮುಚ್ಚಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬಳಿಕ 7 – 8 ನಿಮಿಷ ಬೇಯಿಸಿದ ನಂತರ ಮೆಂತ್ಯೆ ಸೊಪ್ಪು ಕಪ್ಪಾಗಿ ಒಣಗಿದಂತಾದಾಗ ಇದಕ್ಕೆ ತೆಂಗಿನತುರಿ ಸೇರಿಸಿ 2 – 3 ನಿಮಿಷ ಬಿಸಿಮಾಡಿದರೆ ರುಚಿಯಾದ ಹಾಗೂ ಆರೋಗ್ಯಕ್ಕೂ ಹಿತವಾದ ಮಂತ್ಯೆ ಸೊಪ್ಪಿನ ಪಲ್ಯ ಸಿದ್ಧವಾಗುತ್ತದೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !