May 5, 2026
Tuesday, May 5, 2026
spot_img

SHOCKING | ವಿಡಿಯೋ ಕಾಲ್‌ನಲ್ಲಿ ಮಗುವನ್ನು ತೋರಿಸದ ಅತ್ತೆ ಹೊಟ್ಟೆಗೆ ಚಾಕು ಹಾಕಿದ ಅಳಿಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಡಿಯೋ ಕಾಲ್‌ನಲ್ಲಿ ತನ್ನ ಮಗು ಮುಖವನ್ನು ತೋರಿಸದ ಅತ್ತೆಗೆ ಅಳಿಯನೇ ಚಾಕು ಹಾಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬಾಣಂತನಕ್ಕೆಂದು ತವರು ಮನೆಗೆ ಬಂದಿದ್ದ ಪತ್ನಿ ಹಾಗೂ ಮಗುವನ್ನು ನೋಡಲು ದಿನಕ್ಕೆ ಹತ್ತು ಬಾರಿ ಕರೆ ಮಾಡುತ್ತಿದ್ದ ಆರೋಪಿ ಅರವಿಂದ್‌ ಗವಳಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಇರುವ ಮಹಾದೇವಿ ಕರಿಗಾರ ಬೆಳಗಾವಿಯ ಬಿಮ್ಸ್‌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಅರವಿಂದ್‌ಗೆ ಮದುವೆಯಾಗಿದ್ದು, ಈಗ ಎರಡು ತಿಂಗಳ ಹಿಂದೆ ಪತ್ನಿ ಮಗುವಿಗೆ ಜನ್ಮ ನೀಡಿದ್ದರು.

ಅರವಿಂದ್‌ ಮಹಾದೇವಿಗೆ ಕರೆ ಮಾಡಿ ಮೊಮ್ಮಗು ಹಾಗೂ ಪತ್ನಿಯನ್ನು ತೋರಿಸಿ ಎಂದು ಹಿಂಸೆ ನೀಡುತ್ತಿದ್ದ. ಇದರಿಂದ ಕೋಪಗೊಂಡ ಅತ್ತೆ, ಇದು ಬಾಣಂತಿಯ ಮನೆ ನಮಗೆ ನೂರಾರು ಕೆಲಸ ಇದೆ, ಯಾವಾಗಲೂ ಫೋನ್‌ ಕೈಯಲ್ಲಿ ಇಟ್ಕೊಂಡು ಇರೋದಕ್ಕೆ ಆಗೋದಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಕೆಟ್ಟ ಪದಗಳಿಂದ ಅರವಿಂದ್‌ ಅತ್ತೆಗೆ ಬೈದಿದ್ದಾನೆ. ನಮ್ಮೂರಿಗೆ ಕಾಲಿಡಬೇಡ ಎಂದು ಮಹಾದೇವಿ ಕೂಡ ಜೋರು ಮಾಡಿದ್ದಾರೆ. ಇದರಿಂದ ಕೋಪಗೊಂಡ ಅರವಿಂದ್‌ ಸೀದ ಮನೆಗೆ ನುಗ್ಗಿ ಅತ್ತೆಗೆ ಚಾಕು ಹಾಕಿ ಪರಾರಿಯಾಗಿದ್ದ. ಆನಂತರ ಇಂದು ಜೈಲು ನಾಳೆ ಬೇಲು ಆದರೆ ನಿನ್ನನ್ನು ಬಿಡೋದಿಲ್ಲ ಎಂದು ಸ್ಟೇಟಸ್‌ ಹಾಕಿದ್ದ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !