May 8, 2026
Friday, May 8, 2026
spot_img

TCS ವಿವಾದಕ್ಕೆ ಹೊಸ ಟ್ವಿಸ್ಟ್: ಪರಾರಿಯಾಗಿದ್ದ ಪ್ರಮುಖ ಆರೋಪಿ ನಿದಾ ಖಾನ್ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಿಸಿಎಸ್ ಕಚೇರಿಗೆ ಸಂಬಂಧಿಸಿದ ಗಂಭೀರ ಆರೋಪಗಳ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ಹಲವು ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಅಮಾನತುಗೊಂಡ ಉದ್ಯೋಗಿ ನಿದಾ ಖಾನ್ ಅವರನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಂಧನ ಪ್ರಕರಣದ ತನಿಖೆಗೆ ಹೊಸ ವೇಗ ನೀಡಿದೆ.

ಲೈಂಗಿಕ ಕಿರುಕುಳ, ಕಚೇರಿ ದುರುಳತನ ಹಾಗೂ ಸಹೋದ್ಯೋಗಿಗಳ ಮೇಲೆ ಧಾರ್ಮಿಕ ಒತ್ತಡ ಹೇರಿದ ಆರೋಪಗಳ ಹಿನ್ನೆಲೆ ನಿದಾ ಖಾನ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಹಲವು ದೂರುಗಳು ದಾಖಲಾಗಿದ್ದು, ಈಗಾಗಲೇ ಕೆಲ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆಯ ವೇಳೆ ನಿದಾ ಖಾನ್ ಪರಾರಿಯಾಗಿದ್ದರಿಂದ ಆಕೆಯ ಶೋಧ ಕಾರ್ಯಾಚರಣೆ ತೀವ್ರಗೊಂಡಿತ್ತು.

ಇದನ್ನೂ ಓದಿ:

ತಾಂತ್ರಿಕ ನಿಗಾವಳಿ ಮತ್ತು ಗುಪ್ತ ಮಾಹಿತಿ ಆಧರಿಸಿ ಛತ್ರಪತಿ ಸಂಭಾಜಿನಗರದ ನರೇಗಾಂವ್ ಪ್ರದೇಶದಲ್ಲಿದ್ದ ಬಾಡಿಗೆ ಮನೆಯನ್ನು ಪೊಲೀಸರು ಪತ್ತೆಹಚ್ಚಿದರು. ಹಲವು ದಿನಗಳ ನಿಗಾವಳಿಯ ಬಳಿಕ ಕಾರ್ಯಾಚರಣೆ ನಡೆಸಿ ಆಕೆಯನ್ನು ಬಂಧಿಸಲಾಯಿತು. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ತನಿಖೆಗಾಗಿ ನಾಸಿಕ್‌ಗೆ ಕರೆದೊಯ್ಯಲಾಗಿದೆ.

ಈ ಪ್ರಕರಣದಲ್ಲಿ ನಿದಾ ಖಾನ್ ಪ್ರಮುಖ ಸಂಚುಕೋರಳಾಗಿರಬಹುದೆಂಬ ಅನುಮಾನವನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರು ದೂರು ನೀಡದಂತೆ ಒತ್ತಡ ಹೇರಿದ ಆರೋಪವೂ ಕೇಳಿಬಂದಿದ್ದು, ಪ್ರಕರಣದ ನಿಖರ ಸತ್ಯಾಂಶ ಹೊರಬರಲು ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !