May 19, 2026
Tuesday, May 19, 2026
spot_img

SHOCKING | ಕಣ್ಣು ಬಿಡುವ ಮುನ್ನವೇ ಮಗಳಿಗೆ ಆ್ಯಸಿಡ್ ಕುಡಿಸಿದ ಹೆತ್ತಮ್ಮ; ಆಸ್ಪತ್ರೆಗೆ ದಾಖಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜಸ್ಥಾನದ ಭಿವಾಡದ ಕ್ಯಾಪ್ಟನ್ ಚೌಕ್ ಪ್ರದೇಶದಲ್ಲಿ ಹೆತ್ತ ತಾಯಿಯೇ ತನ್ನ ಎಂಟು ತಿಂಗಳ ಹೆಣ್ಣು ಮಗುವಿಗೆ ಬಲವಂತವಾಗಿ ಆ್ಯಸಿಡ್ ಕುಡಿಸಿರುವ ಅತ್ಯಂತ ಆಘಾತಕಾರಿ ಘಟನೆ ನಡೆದಿದೆ. ಪ್ರಸ್ತುತ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಅಲ್ವಾರ್ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ಮಗುವಿನ ತಂದೆ ಮೋಹಿತ್ ಮಾತನಾಡಿ, ನಾನು ಕೆಲಸದಲ್ಲಿದ್ದಾಗ ನನ್ನ ತಂಗಿ ಫೋನ್ ಮಾಡಿ, ಮಗಳ ಸ್ಥಿತಿ ತುಂಬಾ ಗಂಭೀರವಾಗಿದೆ, ಅವಳು ಏನೋ ಕುಡಿದಿದ್ದಾಳೆ ಅಥವಾ ನುಂಗಿದ್ದಾಳೆ ಎಂದು ತಿಳಿಸಿದಳು. ನಾನು ತಕ್ಷಣವೇ ಕಂಪನಿಯಿಂದ ಹೊರಟು ಮನೆಗೆ ಧಾವಿಸಿದೆ. ನನ್ನ ಮಗಳಿಗೆ ಕೇವಲ ಎಂಟು ತಿಂಗಳು. ಅಲ್ಲಿ ನಿಖರವಾಗಿ ಏನಾಯಿತು ಎಂದು ನನಗೆ ತಿಳಿದಿಲ್ಲ, ಆದರೆ ಇದೀಗ ಆಕೆಯ ತಾಯಿಯೇ ಮಗುವಿಗೆ ಆ್ಯಸಿಡ್ ಕುಡಿಸಿದ್ದಾಳೆ ಎಂದು ತಿಳಿದುಬಂದಿದೆ ಎಂದು ಕಣ್ಣೀರಿಟ್ಟಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಾಯಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !