May 20, 2026
Wednesday, May 20, 2026
spot_img

ಪಲ್ಯ, ಗ್ರೇವಿ & More 90 | ಜೋಳದ ರೊಟ್ಟಿಗೆ ಘಮಘಮಿಸುವ ಹೆಸರುಕಾಳಿನ ಚಟ್ನಿ ರೆಸಿಪಿ

ಹೆಸರುಕಾಳಿನ ಚಟ್ನಿ ಉತ್ತರ ಕರ್ನಾಟಕದ ಮನೆಮನೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಒಂದು ಸಾಂಪ್ರದಾಯಿಕ ಮತ್ತು ಆರೋಗ್ಯಕರವಾದ ಚಟ್ನಿಯಾಗಿದೆ. ಪ್ರೊಟೀನ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹೆಸರುಕಾಳನ್ನು ಬಳಸಿ ಮಾಡುವ ಈ ಚಟ್ನಿ, ಬಿಸಿಬಿಸಿ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಚಪಾತಿ ಹಾಗೂ ಇಡ್ಲಿ-ದೋಸೆಯೊಂದಿಗೆ ತಿನ್ನಲು ಅದ್ಭುತವಾದ ಕಾಂಬಿನೇಷನ್.

ಬೇಕಾಗುವ ಸಾಮಾಗ್ರಗಳು:
ಹೆಸರುಕಾಳು
ಹಸಿ ಮೆಣಸಿನಕಾಯಿ:
ಬೆಳ್ಳುಳ್ಳಿ
ಜೀರಿಗೆ
ಹುರಿದ ಶೇಂಗಾ
ಹುಣಸೆಹಣ್ಣು
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ
ಸಾಸಿವೆ
ಉದ್ದಿನಬೇಳೆ
ಕರಿಬೇವು:
ಒಣಮೆಣಸಿನಕಾಯಿ

ಮಾಡುವ ವಿಧಾನ

ಮೊದಲು ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಕಾಯಿಸಿ. ಅದಕ್ಕೆ ಹಸಿಮೆಣಸಿನಕಾಯಿ, ಜೀರಿಗೆ ಮತ್ತು ಬೆಳ್ಳುಳ್ಳಿ ಹಾಕಿ 1 ನಿಮಿಷ ಹುರಿಯಬೇಕು. ನಂತರ ಅದೇ ಬಾಣಲೆಗೆ ಹೆಸರುಕಾಳನ್ನು ಹಾಕಿ, ಹಸಿ ವಾಸನೆ ಹೋಗುವವರೆಗೆ 3-4 ನಿಮಿಷ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿದು, ತಣ್ಣಗಾಗಲು ಬಿಡಬೇಕು. ನಂತರ ಮಿಕ್ಸಿ ಜಾರ್‌ಗೆ ಹುರಿದ ಹೆಸರುಕಾಳಿನ ಮಿಶ್ರಣ, ಹುರಿದ ಶೇಂಗಾ, ಹುಣಸೆಹಣ್ಣು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಸ್ವಲ್ಪ ನೀರು ಹಾಕಿ ತರಿತರಿಯಾಗಿ ರುಬ್ಬಿಕೊಂಡು, ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಬೇಕು. ಬಳಿಕ ಮತ್ತೊಂದು ಸಣ್ಣ ಬಾಣಲೆಯಲ್ಲಿ ಒಗ್ಗರಣೆ ಎಣ್ಣೆ ಕಾಯಿಸಿ ಸಾಸಿವೆ, ಉದ್ದಿನಬೇಳೆ, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಸೀಸಿ, ಚಟ್ನಿಗೆ ಸೇರಿಸಿದರೆ ಘಮಘಮಿಸುವ ಹೆಸರುಕಾಳಿನ ಚಟ್ನಿ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !