May 21, 2026
Thursday, May 21, 2026
spot_img

CINE | ‘ಧುರಂಧರ್’ ಪಾರ್ಟ್ 1 ನೆಟ್‌ಫ್ಲಿಕ್ಸ್‌, ಪಾರ್ಟ್ 2 ಜಿಯೋಹಾಟ್‌ಸ್ಟಾರ್‌! ಪ್ರೇಕ್ಷಕರು ಕನ್ಫ್ಯೂಸ್ ಆಗಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ನಟನೆಯ ಸೂಪರ್ ಹಿಟ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಧುರಂಧರ್’ ಒಟಿಟಿ ಪ್ರೇಕ್ಷಕರಿಗೆ ಭರ್ಜರಿ ಸರ್ಪ್ರೈಸ್ ನೀಡಲು ಸಜ್ಜಾಗಿದೆ. ಈ ಚಿತ್ರದ ಮೊದಲ ಭಾಗವು ಥಿಯೇಟರ್‌ನಲ್ಲಿ ಕತ್ತರಿ ಬಿದ್ದಿದ್ದ ಪ್ರಮುಖ ಮತ್ತು ರಗಡ್ ದೃಶ್ಯಗಳನ್ನೊಳಗೊಂಡ ‘ಅನ್‌ಕಟ್’ ಆವೃತ್ತಿಯಾಗಿ ಮರು-ಬಿಡುಗಡೆಯಾಗುತ್ತಿದೆ. ಯಾವುದೇ ಕಟ್ ಇಲ್ಲದ ಈ ವಿಶೇಷ ಆವೃತ್ತಿಯು ಮೇ 22ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ನೆಟ್‌ಫ್ಲಿಕ್ಸ್ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.

ಇತ್ತೀಚೆಗಷ್ಟೇ ಚಿತ್ರದ ಎರಡನೇ ಭಾಗ ‘ಧುರಂಧರ್: ದಿ ರಿವೇಂಜ್’ ವಿದೇಶಿ ಒಟಿಟಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಮೊದಲ ಭಾಗದ ಅನ್‌ಕಟ್ ವರ್ಷನ್ ಅನೌನ್ಸ್ ಆಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಪ್ರೇಕ್ಷಕರಲ್ಲಿ ಮೂಡಿದ ಒಟಿಟಿ ಗೊಂದಲ

ಒಂದೆಡೆ ಮೊದಲ ಭಾಗದ ರೀ-ರಿಲೀಸ್ ಖುಷಿ ನೀಡಿದ್ದರೆ, ಮತ್ತೊಂದೆಡೆ ಚಿತ್ರದ ಎರಡನೇ ಭಾಗದ ಭಾರತೀಯ ಒಟಿಟಿ ಬಿಡುಗಡೆ ಹಕ್ಕುಗಳು ಪ್ರೇಕ್ಷಕರಲ್ಲಿ ಗೊಂದಲ ಮೂಡಿಸಿವೆ. ‘ಧುರಂಧರ್ 2’ ಈಗಾಗಲೇ ಮೇ 14ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಾಗಿದೆಯಾದರೂ, ಭಾರತದಲ್ಲಿ ಮಾತ್ರ ಇದು ಜೂನ್ 4ರಂದು ‘ಜಿಯೋ ಹಾಟ್‌ಸ್ಟಾರ್’ ಒಟಿಟಿಯಲ್ಲಿ ಪ್ರೀಮಿಯರ್ ಆಗಲಿದೆ. ಒಂದೇ ಸಿನಿಮಾದ ಎರಡು ಭಾಗಗಳು ಬೇರೆ ಬೇರೆ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮಿಶ್ರಪ್ರತಿಕ್ರಿಯೆ ನೀಡುತ್ತಿದ್ದು, ಎರಡೂ ಭಾಗಗಳನ್ನು ಒಂದೇ ಒಟಿಟಿಯಲ್ಲಿ ನೀಡಬೇಕಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !