May 21, 2026
Thursday, May 21, 2026
spot_img

ಮೋದಿ-ಮೆಲೋನಿ ‘Melody’ ಕ್ಷಣ ಇನ್‌ಸ್ಟಾಗ್ರಾಂನಲ್ಲಿ ‘ಸ್ಫೋಟ’: ಬರೋಬ್ಬರಿ 19 ಕೋಟಿ ವೀಕ್ಷಣೆ ದಾಟಿದ ವಿಡಿಯೋ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ‘Melody’ ಕ್ಷಣ ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ವೈರಲ್ ಆಗಿದೆ.

ಮೆಲೋನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಈಗಾಗಲೇ ಬರೋಬ್ಬರಿ 19 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ಏನಿದು ‘Melody’ ಕ್ಷಣ?

ಇತ್ತೀಚಿನ ಅಂತಾರಾಷ್ಟ್ರೀಯ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ Melody ಟಾಫಿ ನೀಡಿದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋದಲ್ಲಿ ಇಬ್ಬರು ನಾಯಕರು ನಗುತ್ತಾ ಮಾತನಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿತ್ತು. ಮೆಲೋನಿ ಹಂಚಿಕೊಂಡಿರುವ ಈ ವಿಡಿಯೋ ಈಗ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ವಿಡಿಯೋಗಳಲ್ಲೊಂದಾಗಿದೆ.

ಈ ನಡುವೆ ಮೋದಿ ಮತ್ತು ಮೆಲೋನಿ ಹೆಸರುಗಳನ್ನು ಸೇರಿಸಿ ಸಾಮಾಜಿಕ ಜಾಲತಾಣ ಬಳಕೆದಾರರು “Melodi” ಎಂಬ ಟ್ರೆಂಡ್ ಆರಂಭಿಸಿದ್ದರು. ಈ ಹ್ಯಾಶ್‌ಟ್ಯಾಗ್ ಈಗ ಮತ್ತೆ ಭಾರೀ ವೇಗದಲ್ಲಿ ವೈರಲ್ ಆಗುತ್ತಿದೆ.

ಜಾಗತಿಕ ಮಟ್ಟದಲ್ಲಿ ಚರ್ಚೆ

ಈ ವಿಡಿಯೋ ಭಾರತ ಮಾತ್ರವಲ್ಲದೆ ಯುರೋಪ್ ಮತ್ತು ಇತರ ದೇಶಗಳಲ್ಲೂ ದೊಡ್ಡ ಮಟ್ಟದಲ್ಲಿ ವೀಕ್ಷಣೆ ಪಡೆಯುತ್ತಿದೆ. ಅನೇಕ ವಿದೇಶಿ ಬಳಕೆದಾರರು ಇಬ್ಬರು ನಾಯಕರ ಸ್ನೇಹಪರ ಕ್ಷಣವನ್ನು ಮೆಚ್ಚಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !