September 24, 2026
Thursday, September 24, 2026
spot_img

ಮೆಲೋನಿಗೆ ‘ಮೆಲೋಡಿ’ ಕೊಟ್ಟ ಮೋದಿ: ಜಾಗತಿಕ ಮಾರುಕಟ್ಟೆಯಲ್ಲಿ ಪಾರ್ಲೆಗೆ ಸಖತ್ ಡಿಮ್ಯಾಂಡ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಮೋದಿ, ಇಟಲಿ ಪ್ರಧಾನಿ ಮೆಲೋನಿಗೆ ಪಾರ್ಲೆಜಿ ಅವರಿಗೆ ಮೆಲೋಡಿ ಚಾಕಲೋಟ್ ಅನ್ನು ಉಡುಗೊರೆ ನೀಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಮೋದಿಯ ಉಡುಗೊರೆ ಬೆನ್ನಲ್ಲೇ ಪಾರ್ಲೆ ಕಂಪನಿ ಅದೃಷ್ಟವು ಬದಲಾಗಿದೆ. ಪಾರ್ಲೆ ಸ್ಟಾಕ್ ರಾಕೆಟ್ ಏರಿಕೆಯಾಗಿದೆ. ಭಾರತದ ಇ-ವ್ಯಾಪಾರಿ ವೇದಿಕೆಯಲ್ಲೂ ಪಾರ್ಲೆ ಮೆಲೋಡಿ ಚಾಕಲೇಟ್ ಔಟ್ ಆಫ್ ಸ್ಟಾಕ್ ಎಂದು ತೋರಿಸುತ್ತಿದೆ.

ಇದು ಜಾಗತಿಕ ಮಾರುಕಟ್ಟೆಯ ಟ್ರೆಂಡ್

ಈ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪಾರ್ಲೆ ಕಂಪನಿಯ ಉಪಾಧ್ಯಕ್ಷ ಮಯಾಂಕ್ ಶಾ, ಇದು ಭಾರತದ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆ ಪರಿಚಯಿಸಿರುವ ಹೊಸ ವಿಧಾನ ಎಂದು ಹೇಳಿದ್ದಾರೆ.

ಪ್ರಪಂಚದಾದ್ಯಂತ ಪಾರ್ಲೆ ಉತ್ಪನ್ನಗಳಿಗೆ ಡಿಮ್ಯಾಂಡ್

ವಿಶ್ವದ ಸುಮಾರು 100 ದೇಶಗಳಿಗೆ ನಮ್ಮ ಕಂಪನಿಯ ಉತ್ಪನ್ನಗಳು ರಫ್ತಾಗುತ್ತಿವೆ. ಈಗ ಪ್ರಧಾನಿ ಮೋದಿ ಅವರು ನೀಡಿರುವ ಈ ಉಡುಗೊರೆ ವಿಡಿಯೋ ಪ್ರಪಂಚದಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದು, ನಮ್ಮ ಉತ್ಪನ್ನಗಳು ಇನ್ನೂ ಹೆಚ್ಚಿನ ದೇಶಗಳ ಮಾರುಕಟ್ಟೆಯನ್ನು ಪ್ರವೇಶಲಿವೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಪಾರ್ಲೆ

ಇದೇ ವೇಳೆ ಇಟಲಿಯ ಪ್ರಧಾನಿಗಳಿಗೆ ಉಡುಗೊರೆಯಾಗಿ ನೀಡಲು ನಮ್ಮ ಕಂಪನಿಯ ಮೆಲೋಡಿ ಚಾಕಲೇಟ್ ಅನ್ನು ಆಯ್ದುಕೊಂಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು ಎಂದು ಮಯಾಂಕ್ ಶಾ ಖುಷಿ ಹಂಚಿಕೊಂಡಿದ್ದಾರೆ.

ಇತ್ತ ಷೇರುಮಾರುಕಟ್ಟೆಯಲ್ಲೂ ಪಾರ್ಲೆ ಷೇರುಗಳ ಮೌಲ್ಯ ಏರಿಕೆ ಕಂಡಿದೆ. ಪಾರ್ಲೆ ಇತರ ಉತ್ಪನ್ನಗಳಿಗೂ ಬೇಡಿಕೆ ಬಂದಿದೆ. ಮೋದಿ ಮೆಲೋಡಿ ವಿಡಿಯೋ ಒಂದೆಡೆ ವೈರಲ್ ಆಗುತ್ತಿದ್ದರೆ, ಇತ್ತ ಮೆಲೋಡಿ ಚಾಕೋಲೇಟ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !