July 24, 2026
Friday, July 24, 2026
spot_img

SRH vs RCB | ಹೈದರಾಬಾದ್‌ ವಿರುದ್ಧ ಸೋಲು: ಆದ್ರೂ ಪರವಾಗಿಲ್ಲ ಟಾಪ್‌ನಲ್ಲೇ ಇರ್ತೀವಿ ಎಂದ ಆರ್‌ಸಿಬಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನಲ್ಲಿ ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೋಲು ಕಂಡರೂ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಮೊದಲ ಕ್ವಾಲಿಫೈಯರ್‌ಗೆ ಪ್ರವೇಶಿಸಿದೆ. ಭಾರೀ ರನ್‌ ಮಳೆಯ ನಡುವೆಯೂ ಆರ್‌ಸಿಬಿ ತನ್ನ ನೆಟ್‌ ರನ್‌ರೇಟ್ ಲೆಕ್ಕಾಚಾರದಲ್ಲಿ ಯಶಸ್ವಿಯಾಯಿತು.

ಎಸ್‌ಆರ್‌ಹೆಚ್ ಬ್ಯಾಟರ್‌ಗಳ ಸಿಡಿಲಬ್ಬರ

ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್‌ ತಂಡ 4 ವಿಕೆಟ್‌ಗೆ 255 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಅಭಿಷೇಕ್ ಶರ್ಮಾ ಕೇವಲ 22 ಎಸೆತಗಳಲ್ಲಿ ಸ್ಫೋಟಕ 56 ರನ್‌ ಸಿಡಿಸಿ ಆರಂಭಿಕ ದಾಳಿ ನಡೆಸಿದರು. ಬಳಿಕ ಇಶಾನ್ ಕಿಶನ್ 79 ರನ್‌ಗಳ ಆಕರ್ಷಕ ಇನ್ನಿಂಗ್ಸ್ ಆಡಿದರೆ, ಹೆನ್ರಿಚ್ ಕ್ಲಾಸೆನ್ 51 ರನ್‌ ಬಾರಿಸಿ ಆರ್‌ಸಿಬಿ ಬೌಲರ್‌ಗಳನ್ನು ಕಂಗೆಡಿಸಿದರು.

ಇದನ್ನೂ ಓದಿ:

ಪಟಿದಾರ್-ಕೃನಾಲ್ ಹೋರಾಟ ವ್ಯರ್ಥ

ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭದಲ್ಲೇ ಆಘಾತ ಎದುರಾಯಿತು. ವಿರಾಟ್ ಕೊಹ್ಲಿ ಬೇಗನೆ ಔಟಾದರು. ಆದರೆ ನಾಯಕ ರಜತ್ ಪಟಿದಾರ್ 56 ರನ್ ಮತ್ತು ಕೃನಾಲ್ ಪಾಂಡ್ಯ ಅಜೇಯ 41 ರನ್‌ಗಳ ನೆರವಿನಿಂದ ತಂಡ ಹೋರಾಟ ಮುಂದುವರಿಸಿತು. ಕೊನೆಯಲ್ಲಿ ಬೆಂಗಳೂರು 20 ಓವರ್‌ಗಳಲ್ಲಿ 200 ರನ್‌ಗಳಿಗೆ ಸೀಮಿತವಾಯಿತು.

ಸೋಲಿನಲ್ಲೂ ಸಿಕ್ಕ ದೊಡ್ಡ ಲಾಭ

ಪಂದ್ಯ ಸೋತರೂ 18 ಅಂಕಗಳೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಉತ್ತಮ ನೆಟ್‌ ರನ್‌ರೇಟ್ ನೆರವಿನಿಂದ ಬೆಂಗಳೂರು ತಂಡ ಇದೀಗ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !