July 25, 2026
Saturday, July 25, 2026
spot_img

CINE | ‘ಬಂದರ್’ ಟ್ರೈಲರ್‌ನಲ್ಲಿ ಶೆಟ್ರ ಮ್ಯಾಜಿಕ್: ಒಂದು ನಗುವಿನಲ್ಲೇ ಗಮನ ಸೆಳೆದ ಕನ್ನಡದ ನಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಹೊಸ ಸಿನಿಮಾ ಬಂದರ್ ಟ್ರೈಲರ್ ಇದೀಗ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ವಿಶೇಷವಾಗಿ ಕನ್ನಡದ ನಟ ರಾಜ್ ಬಿ ಶೆಟ್ಟಿ ಕೇವಲ ಕೆಲವೇ ಕ್ಷಣ ಕಾಣಿಸಿಕೊಂಡರೂ ತಮ್ಮ ಎಕ್ಸ್‌ಪ್ರೆಷನ್ ಮೂಲಕ ಟ್ರೈಲರ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ. ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಚಿತ್ರ ಜೂನ್ 5ರಂದು ಬಿಡುಗಡೆಯಾಗಲಿದೆ.

ಜೈಲು ಹಿನ್ನೆಲೆಯ ಕಥೆಗೆ ಕುತೂಹಲ

‘ಬಂದರ್’ ಚಿತ್ರದಲ್ಲಿ ಬಾಲಿವುಡ್ ನಟ ಬಾಬಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಮೀರ್ ಮೆಹರಾ ಎನ್ನುವ ಪಾತ್ರದ ಸುತ್ತ ಕಥೆ ಸಾಗುತ್ತಿದ್ದು, ಕೆಲವು ಘಟನೆಗಳ ಪರಿಣಾಮ ಆತ ಜೈಲು ಸೇರಬೇಕಾಗುತ್ತದೆ. ಟ್ರೈಲರ್‌ನಲ್ಲಿ ಜೈಲು ಹಿನ್ನೆಲೆ ಹಾಗೂ ಮಾನಸಿಕ ಸಂಘರ್ಷಗಳ ಛಾಯೆ ಹೆಚ್ಚಾಗಿ ಕಾಣಿಸುತ್ತದೆ.

ಇದನ್ನೂ ಓದಿ:

ಒಂದು ಸೀನ್‌ನಲ್ಲೇ ರಾಜ್ ಬಿ ಶೆಟ್ಟಿ ಹೈಲೈಟ್

ಟ್ರೈಲರ್‌ನಲ್ಲಿ ರಾಜ್ ಬಿ ಶೆಟ್ಟಿ ತುಂಬಾ ಕಡಿಮೆ ಹೊತ್ತು ಕಾಣಿಸಿಕೊಂಡರೂ, ಅವರ ನಗು ಮತ್ತು ಕಣ್ಣುಗಳ ಅಭಿವ್ಯಕ್ತಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಕೈದಿಗಳ ನಡುವೆ ಸಾಮಾನ್ಯ ವ್ಯಕ್ತಿಯಂತೆ ಕಾಣಿಸಿಕೊಂಡಿರುವ ರಾಜ್ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಡೈಲಾಗ್‌ಗಳಿಂದಲೇ ಹೈಪ್ ಹೆಚ್ಚಿಸಿದ ಟ್ರೈಲರ್

“ನಮ್ಮ ಸರ್ಕಸ್‌ನಲ್ಲಿ ನಾವೇ ಮಂಗಗಳು” ಎಂಬ ಡೈಲಾಗ್ ಟ್ರೈಲರ್‌ನ ಕೊನೆಯಲ್ಲಿ ಕೇಳಿಬರುತ್ತಿದ್ದು, ಚಿತ್ರದ ಕಥಾಹಂದರದ ಗಂಭೀರತೆಯನ್ನು ಸೂಚಿಸುತ್ತದೆ. ಅನುರಾಗ್ ಕಶ್ಯಪ್ ಮತ್ತೊಮ್ಮೆ ವಿಭಿನ್ನ ಕಂಟೆಂಟ್ ಮೂಲಕ ಸಿನಿರಸಿಕರ ಮುಂದೆ ಬರುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !