May 24, 2026
Sunday, May 24, 2026
spot_img

IPL | ಡೆಲ್ಲಿಗೆ ಕೆಎಲ್ ರಾಹುಲ್ ಬಲ: ಕೋಲ್ಕತ್ತಾ ಗೆಲುವಿಗೆ ಬಿಗ್ ಟಾರ್ಗೆಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: .

ಐಪಿಎಲ್ ನ ಕೊನೆಯ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮತ್ತು ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.

ಮೊದಲು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಿತು. ಅಭಿಷೇಕ್ ಪೊರೆಲ್ ಮತ್ತು ಕೆಎಲ್ ರಾಹುಲ್ 40 ರನ್ ಗಳ ಜೊತೆಯಾಟ ನೀಡಿದರು. ಅಭಿಷೇಕ್ 18 ಎಸೆತಗಳಲ್ಲಿ 22 ರನ್ ಗಳಿಸಿ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಸಾಹಿಲ್ ಪರಾಕ್ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ರಾಹುಲ್ ಉತ್ತಮ ಆಟ

ಉತ್ತಮ ಆಡುತ್ತಿದ್ದ ರಾಹುಲ್ 30 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ಗಳ ಸಹಿತ 60 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಅಕ್ಷರ್ ಪಟೇಲ್ 35 ರನ್‌ಗಳಿಸಿ ಪೆವಿಲಿಯನ್ ಗೆ ಸೇರಿದರು. ಡೇವಿಡ್ ಮಿಲ್ಲರ್ 28 ರನ್‌, ಅಶುತೋಷ್ ಶರ್ಮಾ 18 ರನ್‌ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಈ ಮೂಲಕ ತಂಡದ ಮೊತ್ತ 203 ಗಡಿ ದಾಟಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !