September 10, 2026
Thursday, September 10, 2026
spot_img

IPL | ಪ್ಲೇ ಆಫ್ ಗೆ ಎಂಟ್ರಿಕೊಟ್ಟ ರಾಜಸ್ತಾನ: ಮುಂದಿನ ಕ್ವಾಲಿಫೈಯರ್ ಮ್ಯಾಚ್ ಗೆ ನಾಲ್ಕು ಟೀಮ್ ಗಳು ಸಜ್ಜು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳು ಇಂದಿಗೆ ಮುಕ್ತಯವಾಗಲಿದ್ದು, ಇನ್ಮುಂದೆ ಪ್ಲೇ ಆಫ್ ಅಬ್ಬರ ಶುರುವಾಗಲಿದೆ.

ಈಗಾಗಲೇ ಪ್ಲೇ ಆಫ್ ಗೆ ಮೂರು ಸ್ಥಾನ ಖಚಿತಗೊಂಡ ಬಳಿಕ ನಾಲ್ಕನೇ ಸ್ಥಾನ ಯಾರಿಗೆ ಅನ್ನೋ ಕುತೂಹಲ ಮನೆ ಮಾಡಿತ್ತು. ಇದೀಗ ಆ ರಾಜಸ್ಥಾನ ರಾಯಲ್ಸ್ ತಂಡವು ಮುಂಬೈ ವಿರುದ್ಧ ಗೆದ್ದು ಪ್ರವೇಶ ಪಡೆದಿದೆ. ಇದರಿಂದ ರೇಸ್‌ ನಲ್ಲಿದ್ದ ಪಂಜಾಬ್ ಕಿಂಗ್ಸ್, ಕೆಕೆಆರ್, ಡೆಲ್ಲಿ ತಂಡಗಳು ಹೊರಬಿದ್ದಿದೆ. ಆರ್‌ಸಿಬಿ,ಗುಜರಾತ್ ಟೈಟಾನ್ಸ್,ಸನ್‌ರೈಸರ್ಸ್ ಹೈದರಾಬಾದ್ ಹಾಗು ರಾಜಸ್ತಾನ ತಂಡಗಳು ಪ್ಲೇ ಆಫ್ ನಲ್ಲಿ ಸ್ಥಾನ ಭದ್ರಗೊಳಿಸಿದೆ.

ಮೊದಲ ಕ್ವಾಲಿಫೈಯರ್ ಗೆದ್ದ ಟೀಮ್ ಫೈನಲ್ ಗೆ ಲಗ್ಗೆ

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದ್ದು, ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಮೇ.26ಕ್ಕೆ ಈ ಪಂದ್ಯ ನಡೆಯಲಿದೆ.

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ಎಲಿಮಿನೇಟರ್ ಪಂದ್ಯ ಆಡಲಿದೆ. ಇಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಇತ್ತ ಗೆದ್ದ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡದ ಜೊತೆಗೆ ಎರಡನೇ ಕ್ವಾಲಿಫೈಯರ್ ಆಡಲಿದೆ. ಇಲ್ಲಿ ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ.

ಮೇ.31ಕ್ಕೆ ಫೈನಲ್ ಪಂದ್ಯ

ಈ ಬಾರಿಯ ಐಪಿಎಲ್ ಫೈನಲ್ ಪಂದ್ಯವು ಅಹಮ್ಮದಾಬಾದ್‌ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ.31ರಂದು ನಡೆಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !