ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಸಿನಿಪ್ರಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಹೊಸ ತಮಿಳು ಸಿನಿಮಾಗಳ ಬಿಡುಗಡೆಯ ಮೊದಲ ವಾರದಲ್ಲಿ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ದಿನಕ್ಕೆ 5 ಶೋ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದೆ. ಮುಖ್ಯಮಂತ್ರಿ ಜೋಸೆಫ್ ವಿಜಯ್ ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
ಚಿತ್ರರಂಗದ ಮನವಿಗೆ ಸರ್ಕಾರ ಒಪ್ಪಿಗೆ
ತಮಿಳು ಚಿತ್ರರಂಗದ ಪ್ರತಿನಿಧಿಗಳು ಹೆಚ್ಚುವರಿ ಶೋಗಳಿಗೆ ಅವಕಾಶ ನೀಡುವಂತೆ ಸರ್ಕಾರವನ್ನು ಮನವಿ ಮಾಡಿದ್ದರು. ಚಿತ್ರರಂಗದ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಇದೀಗ ನಿಯಮಗಳಲ್ಲಿ ಬದಲಾವಣೆ ತಂದಿದೆ.
ಇದನ್ನೂ ಓದಿ:
ಮೊದಲ 7 ದಿನ ಫುಲ್ ಎಂಟರ್‌ಟೈನ್‌ಮೆಂಟ್
ಹೊಸ ಆದೇಶದ ಪ್ರಕಾರ, ಸಿನಿಮಾ ಬಿಡುಗಡೆಯಾದ ಮೊದಲ 7 ದಿನಗಳ ಕಾಲ ದಿನಕ್ಕೆ 5 ಶೋಗಳನ್ನು ನಡೆಸಬಹುದು. ಇದರಿಂದ ದೊಡ್ಡ ಸಿನಿಮಾಗಳಿಗೆ ಹೆಚ್ಚುವರಿ ಪ್ರದರ್ಶನ ಸಿಗಲಿದೆ.
ಹಬ್ಬ-ರಜೆ ದಿನಗಳಲ್ಲೂ 5 ಶೋ ಅವಕಾಶ
ಶನಿವಾರ, ಭಾನುವಾರ, ಸಾರ್ವಜನಿಕ ರಜೆ ಹಾಗೂ ಸ್ಥಳೀಯ ಹಬ್ಬಗಳ ದಿನಗಳಲ್ಲೂ 5 ಶೋ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಅನುಮತಿ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.



