ಸಾಮಾಗ್ರಿಗಳು
ಟೊಮ್ಯಾಟೊ
ಈರುಳ್ಳಿ
ಶೇಂಗಾ
ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ
ಕಾಯಿ
ಬೆಳ್ಳುಳ್ಳಿ
ಉಪ್ಪು
ಜೀರಿಗೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಶೇಂಗಾ ಹಾಕಿ ಹುರಿದುಕೊಳ್ಳಿ, ಇದರ ಜೊತೆಗೆ ಹಸಿಮೆಣಸು ಹಾಗೂ ಒಣಮೆಣಸನ್ನು ಹಾಕಿಕೊಳ್ಳಿ
ಆನಂತರ ಅದನ್ನು ತೆಗೆದು ಆರಲು ಬಿಡಿ, ಕಡೆಗೆ ಟೊಮ್ಯಾಟೊ ಹಾಗೂ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹುರಿದುಕೊಳ್ಳಿ
ಮತ್ತೆ ಈ ಎಲ್ಲವನ್ನೂ ತಣ್ಣಗೆ ಆಗಲು ಬಿಡಿ, ಕಾಯಿ, ಉಪ್ಪು, ಜೀರಿಗೆ ಹಾಕಿ ರುಬ್ಬಿ
ಹದ ನೋಡಿಕೊಂಡು ನೀರು ಹಾಕಿ ಚಟ್ನಿ ತಯಾರಿಸಿ, ಒಗರಣೆ ಕೊಟ್ರೆ ಚಟ್ನಿ ರೆಡಿ



