July 26, 2026
Sunday, July 26, 2026
spot_img

ದೆಹಲಿ to ಸಿಲಿಗುರಿ ಹೈ ಸ್ಪೀಡ್ ಕಾರಿಡಾರ್: ದೇಶದ ಎರಡನೇ ಬುಲೆಟ್ ರೈಲಿಗೆ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಹೈ-ಸ್ಪೀಡ್ ರೈಲು ಜಾಲವನ್ನು ವಿಸ್ತರಿಸುವ ಉದ್ದೇಶದಿಂದ ದೆಹಲಿ ಮತ್ತು ಪಶ್ಚಿಮ ಬಂಗಾಳದ ಸಿಲಿಗುರಿಯನ್ನು ಸಂಪರ್ಕಿಸುವ ಹೊಸ ಬುಲೆಟ್ ರೈಲು ಯೋಜನೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಈ ಯೋಜನೆ ಉತ್ತರ ಭಾರತ ಮತ್ತು ಈಶಾನ್ಯ ಭಾಗಗಳ ಸಂಪರ್ಕಕ್ಕೆ ಹೊಸ ಆಯಾಮ ನೀಡಲಿದೆ.

ಪ್ರಮುಖ ನಗರಗಳಿಗೆ ಸಂಪರ್ಕ

ಈ ಹೈ-ಸ್ಪೀಡ್ ರೈಲು ದೆಹಲಿ, ಜೇವರ್ ವಿಮಾನ ನಿಲ್ದಾಣ, ಆಗ್ರಾ, ಲಕ್ನೋ, ಪ್ರಯಾಗ್‌ರಾಜ್, ವಾರಾಣಸಿ, ಪಾಟ್ನಾ ಸೇರಿದಂತೆ ಹಲವು ಪ್ರಮುಖ ನಗರಗಳ ಮೂಲಕ ಸಾಗಿ ನ್ಯೂ ಜಲ್ಪೈಗುರಿ ತಲುಪಲಿದೆ.

ಪ್ರಯಾಣದ ಅವಧಿಯಲ್ಲಿ ಭಾರಿ ಇಳಿಕೆ

ಪ್ರಸ್ತುತ ಸುಮಾರು 18 ರಿಂದ 20 ಗಂಟೆ ತೆಗೆದುಕೊಳ್ಳುವ ದೆಹಲಿ-ಸಿಲಿಗುರಿ ಪ್ರಯಾಣ, ಯೋಜನೆ ಪೂರ್ಣಗೊಂಡ ಬಳಿಕ ಕೇವಲ ಆರು ಗಂಟೆಗಳಲ್ಲಿ ಸಾಧ್ಯವಾಗಲಿದೆ. ರೈಲು ಗಂಟೆಗೆ 250 ರಿಂದ 300 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ:

ಅಭಿವೃದ್ಧಿಗೆ ಹೊಸ ಉತ್ತೇಜನ

ಈ ಯೋಜನೆಯಿಂದ ಪ್ರವಾಸೋದ್ಯಮ, ವ್ಯಾಪಾರ ಹಾಗೂ ಸರಕು ಸಾಗಣೆ ವ್ಯವಸ್ಥೆಗೆ ಹೊಸ ಚೈತನ್ಯ ಸಿಗಲಿದ್ದು, ಉತ್ತರ ಬಂಗಾಳ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಭೂಸ್ವಾಧೀನಕ್ಕೆ ಸಿದ್ಧತೆ

ಯೋಜನೆಗಾಗಿ ಭೂಸ್ವಾಧೀನ ಕಾರ್ಯವನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ಕಾಮಗಾರಿ ಆರಂಭಿಸುವ ಗುರಿ ಹೊಂದಲಾಗಿದೆ. ತಾಂತ್ರಿಕ ಸವಾಲುಗಳನ್ನು ಎದುರಿಸಲು ರೈಲ್ವೆ ಇಲಾಖೆ ವಿಶೇಷ ಯೋಜನೆ ರೂಪಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !