ಮುಖದ ಮೇಲಿನ ಮೊಡವೆಗಳನ್ನು ನಿವಾರಿಸಲು ನಾವು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಮ್‌ಗಳು, ಫೇಸ್ ವಾಶ್‌ಗಳು ಮತ್ತು ಸೀರಮ್‌ಗಳನ್ನು ಬಳಸಿ ಸುಸ್ತಾಗಿರುತ್ತೇವೆ. ಆದರೆ, ಚರ್ಮದ ಮೇಲ್ಭಾಗಕ್ಕೆ ಏನೇ ಹಚ್ಚಿದರೂ ಮೊಡವೆಗಳು ಸಂಪೂರ್ಣವಾಗಿ ಕಡಿಮೆ ಆಗುವುದಿಲ್ಲ. ಇದಕ್ಕೆ ಕಾರಣ, ಮೊಡವೆಗಳ ನಿಜವಾದ ಬೇರು ಇರುವುದು ನಮ್ಮ ಮುಖದ ಮೇಲಲ್ಲ, ಬದಲಿಗೆ ನಮ್ಮ ಹೊಟ್ಟೆಯಲ್ಲಿ.
ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ನಮ್ಮ ಜೀರ್ಣಾಂಗವ್ಯೂಹ ಮತ್ತು ತ್ವಚೆಯ ನಡುವೆ ಆಳವಾದ ಸಂಪರ್ಕವಿದೆ. ಇದನ್ನು ವೈದ್ಯಕೀಯ ಜಗತ್ತಿನಲ್ಲಿ “ಗಟ್-ಸ್ಕಿನ್ ಆಕ್ಸಿಸ್”ಎಂದು ಕರೆಯಲಾಗುತ್ತದೆ. ಹೊಟ್ಟೆಯ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಮೂಲಕ ಮುಖದ ಮೊಡವೆಗಳನ್ನು ಶಾಶ್ವತವಾಗಿ ಹೇಗೆ ಮಾಯ ಮಾಡಬಹುದು ಎಂಬುದರ ಬಗ್ಗೆ ತಿಳಿಯೋಣ.
ಹೊಟ್ಟೆ ಮತ್ತು ಮೊಡವೆಗಳ ನಡುವಿನ ವೈಜ್ಞಾನಿಕ ಲಿಂಕ್ ಏನು?
ನಮ್ಮ ಕರುಳಿನಲ್ಲಿ ಕೋಟ್ಯಂತರ ಸೂಕ್ಷ್ಮಾಣುಜೀವಿಗಳು ವಾಸಿಸುತ್ತವೆ. ಇವುಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳು ಎರಡೂ ಇರುತ್ತವೆ. ನಾವು ಅತಿಯಾದ ಜಂಕ್ ಫುಡ್, ಸಕ್ಕರೆ ಅಥವಾ ಸಂಸ್ಕರಿಸಿದ ಆಹಾರವನ್ನು ತಿಂದಾಗ ಕೆಟ್ಟ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ. ಇದು ದೇಹದಲ್ಲಿ ಆಂತರಿಕ ಉರಿಯೂತವನ್ನುಸೃಷ್ಟಿಸುತ್ತದೆ. ಈ ಉರಿಯೂತವು ರಕ್ತದ ಮೂಲಕ ಚರ್ಮದ ಜೀವಕೋಶಗಳನ್ನು ತಲುಪಿ, ಮುಖದ ಮೇಲೆ ಕೆಂಪು ಮೊಡವೆಗಳು ಮತ್ತು ಕೀವು ಗುಳ್ಳೆಗಳಾಗಿ ಮಾರ್ಪಡುತ್ತದೆ. ಹಾಗಾಗಿ ಹೊಟ್ಟೆ ಶಾಂತವಾದರೆ, ಚರ್ಮವೂ ಶಾಂತವಾಗುತ್ತದೆ.
‘ಲೀಕಿ ಗಟ್’ ಮತ್ತು ಚರ್ಮದ ವಿಷಕಾರಿ ಅಂಶಗಳು
ಜೀರ್ಣಕ್ರಿಯೆ ಸರಿಯಾಗಿಲ್ಲದಿದ್ದರೆ ಅಥವಾ ದೀರ್ಘಕಾಲದ ಮಲಬದ್ಧತೆ ಇದ್ದರೆ, ಕರುಳಿನ ಗೋಡೆಗಳು ದುರ್ಬಲಗೊಳ್ಳುತ್ತವೆ. ಇದನ್ನು ‘ಲೀಕಿ ಗಟ್’ ಎನ್ನಲಾಗುತ್ತದೆ. ಇದರಿಂದ ಜೀರ್ಣವಾಗದ ಆಹಾರದ ಕಣಗಳು ಮತ್ತು ವಿಷಕಾರಿ ಅಂಶಗಳು ನೇರವಾಗಿ ರಕ್ತಕ್ಕೆ ಸೇರುತ್ತವೆ. ದೇಹವು ಈ ವಿಷವನ್ನು ಹೊರಹಾಕಲು ಚರ್ಮದ ರಂಧ್ರಗಳನ್ನು ಬಳಸಿಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಚರ್ಮದ ರಂಧ್ರಗಳು ಬ್ಲಾಕ್ ಆಗಿ ಮೊಡವೆಗಳು ಸೃಷ್ಟಿಯಾಗುತ್ತವೆ. ಹೊಟ್ಟೆ ಸ್ವಚ್ಛವಾಗಿದ್ದರೆ, ವಿಷಕಾರಿ ಅಂಶಗಳು ಮಲ-ಮೂತ್ರದ ಮೂಲಕವೇ ದೇಹದಿಂದ ಹೊರಹೋಗುತ್ತವೆ.
ಹಾರ್ಮೋನ್ ಮತ್ತು ಜಿಡ್ಡಿನ ನಿಯಂತ್ರಣ
ನಮ್ಮ ಕರುಳಿನ ಆರೋಗ್ಯವು ಇನ್ಸುಲಿನ್ ಹಾರ್ಮೋನ್ ಮಟ್ಟವನ್ನು ನಿಯಂತ್ರಿಸುತ್ತದೆ. ಹೊಟ್ಟೆಯ ಆರೋಗ್ಯ ಕೆಟ್ಟಾಗ ದೇಹದಲ್ಲಿ ಇನ್ಸುಲಿನ್ ಮತ್ತು ಆಂಡ್ರೋಜೆನ್ ಹಾರ್ಮೋನ್‌ಗಳ ಏರುಪೇರಾಗುತ್ತದೆ. ಇವು ಮುಖದಲ್ಲಿ ಅತಿಯಾದ ಸೀಬಮ್ಉತ್ಪತ್ತಿಯಾಗುವಂತೆ ಪ್ರೇರೇಪಿಸುತ್ತವೆ. ಮುಖದಲ್ಲಿ ಜಿಡ್ಡು ಹೆಚ್ಚಾದಷ್ಟೂ ಧೂಳು ಕುಳಿತು ಮೊಡವೆಗಳು ಹೆಚ್ಚಾಗುತ್ತವೆ. ಕರುಳು ಆರೋಗ್ಯವಾಗಿದ್ದರೆ ಹಾರ್ಮೋನ್‌ಗಳು ಸಮತೋಲನದಲ್ಲಿರುತ್ತವೆ.
ಇದನ್ನು ಓದಿ:
ಪೋಷಕಾಂಶಗಳ ಹೀರಿಕೊಳ್ಳುವಿಕೆ
ತ್ವಚೆಯು ಆರೋಗ್ಯವಾಗಿರಲು ಮತ್ತು ಮೊಡವೆಗಳ ಕಲೆಗಳು ಬೇಗ ವಾಸಿಯಾಗಲು ವಿಟಮಿನ್ ಎ, ಸಿ, ಇ ಮತ್ತು ಝಿಂಕ್ ಅತ್ಯಗತ್ಯ. ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿದ್ದಾಗ ಮಾತ್ರ ತಿನ್ನುವ ಆಹಾರದಿಂದ ಈ ಪೋಷಕಾಂಶಗಳನ್ನು ಕರುಳು ಸರಿಯಾಗಿ ಹೀರಿಕೊಂಡು ಚರ್ಮಕ್ಕೆ ತಲುಪಿಸಲು ಸಾಧ್ಯವಾಗುತ್ತದೆ.



