June 18, 2026
Thursday, June 18, 2026
spot_img

ಬೆಟ್ಟ ಹತ್ತುವಾಗ ಜೊತೆಯಲ್ಲಿದ್ದವರು ಟೀಂ ಇಂಡಿಯಾ ಸ್ಟಾರ್‌ಗಳು: ಸತ್ಯ ಗೊತ್ತಾಗಿ ತಲೆ ಚಚ್ಚಿಕೊಂಡ ಮಹಿಳಾ ವ್ಲಾಗರ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೀವನದಲ್ಲಿ ಕೆಲ ಅವಕಾಶ ಕಣ್ಣೆದುರೇ ಬಂದು ಹೋಗುತ್ತವೆ. ಆದರೆ ಅವುಗಳ ಬೆಲೆ ಗೊತ್ತಾಗುವುದು ತುಂಬಾ ತಡವಾಗಿ. ಇದೀಗ ಅಂತಹದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಹಿಮಾಚಲ ಪ್ರದೇಶದ ಸುಂದರ ಪರ್ವತ ಪ್ರದೇಶವಾದ ಧರ್ಮಶಾಲಾದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳಾ ಟ್ರಾವೆಲ್ ವ್ಲಾಗರ್ ಒಬ್ಬರು, ದಾರಿಯಲ್ಲಿ ಭೇಟಿಯಾದ ಕೆಲ ಯುವಕರೊಂದಿಗೆ ಮಾತುಕತೆ ನಡೆಸಿ, ಅವರ ಜೊತೆ ಪ್ರಯಾಣ ಕೂಡ ಮಾಡಿದ್ದಾರೆ. ಆದರೆ ಆ ಯುವಕರು ಸಾಮಾನ್ಯ ಪ್ರವಾಸಿಗರಲ್ಲ, ಭಾರತದ ಕ್ರಿಕೆಟ್ ತಂಡದ ಆಟಗಾರರು ಎಂಬುದು ಆಕೆಗೆ ಆ ವೇಳೆ ಗೊತ್ತೇ ಇರಲಿಲ್ಲ!

ಟ್ರೆಕ್ ಮುಗಿದ ಬಳಿಕ ವ್ಲಾಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಡಿಯೋ ನೋಡಿದ ನೆಟ್ಟಿಗರು ತಕ್ಷಣವೇ ಇದು ಟೀಂ ಇಂಡಿಯಾದ ಕ್ರಿಕೆಟಿಗರು ಎಂದು ಕಾಮೆಂಟ್ ಮಾಡಲು ಆರಂಭಿಸಿದರು. ಇದನ್ನು ಗಮನಿಸಿದ ವ್ಲಾಗರ್, ಅಯ್ಯೋ, ನನಗೆ ಆಗ ಗೊತ್ತೇ ಇರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದೇ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಭರ್ಜರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ:

ಒಂದು ಸೆಲ್ಫಿ ಕೂಡ ತೆಗೆದುಕೊಳ್ಳಲಿಲ್ಲ!

ಸಾಮಾನ್ಯವಾಗಿ ಭಾರತದ ಕ್ರಿಕೆಟ್ ಆಟಗಾರರನ್ನು ಒಮ್ಮೆ ನೋಡಲು ಸಾವಿರಾರು ಅಭಿಮಾನಿಗಳು ಕಾತರದಿಂದ ಕಾಯುತ್ತಾರೆ. ಆದರೆ ಇಲ್ಲಿ ಒಬ್ಬ ಮಹಿಳೆಗೆ ಅವರ ಜೊತೆ ಸಾಕಷ್ಟು ಸಮಯ ಕಳೆಯುವ ಅವಕಾಶ ಸಿಕ್ಕಿದ್ದರೂ, ಅವರು ಯಾರು ಎಂಬುದು ಗೊತ್ತಾಗಿರಲಿಲ್ಲ. ಈ ಕಾರಣದಿಂದಲೇ ಈ ಘಟನೆ ನೆಟ್ಟಿಗರ ಗಮನ ಸೆಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !