July 1, 2026
Wednesday, July 1, 2026
spot_img

ಉದ್ಯೋಗ ಖಾತ್ರಿ ಯೋಜನೆಗೆ ಹೊಸ ರೂಪ: ಇಂದಿನಿಂದಲೇ ‘ವಿ ಬಿ ಜಿ ರಾಮ್ ಜಿ’ ಅಧಿಕೃತ ಜಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದ ಐತಿಹಾಸಿಕ ‘ಮನರೇಗಾ’ ಯೋಜನೆ ಇಂದಿನಿಂದ ಇತಿಹಾಸದ ಪುಟಗಳನ್ನು ಸೇರಿದೆ. ಕೇಂದ್ರ ಸರ್ಕಾರವು ಇಂದಿನಿಂದ (ಜುಲೈ 1) ಜಾರಿಗೆ ಬರುವಂತೆ ‘ಮನರೇಗಾ’ ಬದಲಿಗೆ ಅತ್ಯಾಧುನಿಕ ಹಾಗೂ ತಂತ್ರಜ್ಞಾನ ಆಧಾರಿತ ‘ವಿಕಸಿತ್ ಭಾರತ ಗ್ರಾಮೀಣ ಉದ್ಯೋಗ ಗ್ಯಾರಂಟಿ ಮಿಷನ್’ ಎಂಬ ಹೊಸ ಉದ್ಯೋಗ ಖಾತ್ರಿ ಯೋಜನೆಯನ್ನು ಅಧಿಕೃತವಾಗಿ ಅನುಷ್ಠಾನಕ್ಕೆ ತಂದಿದೆ.

ಹೊಸ ಹೆಸರು ಮತ್ತು ರೂಪ:

ಇಂದಿನಿಂದ ದೇಶಾದ್ಯಂತ ಹಳೆಯ ಮನರೇಗಾ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡು ‘ವಿ ಬಿ ಜಿ ರಾಮ್ ಜಿ’ ಕಾರ್ಯರೂಪಕ್ಕೆ ಬಂದಿದೆ. ಹೊಸ ಯೋಜನೆಯಡಿ ಗ್ರಾಮೀಣ ಕಾರ್ಮಿಕರ ಹಾಜರಾತಿ ಮತ್ತು ಕೂಲಿ ಪಾವತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆಧುನಿಕ ತಂತ್ರಜ್ಞಾನದಡಿ ತರಲಾಗಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಿ ಮೋದಿಯವರ ಕನಸಿಗೆ ಪೂರಕವಾಗಿ ಗ್ರಾಮೀಣ ಭಾಗದಲ್ಲಿ ಸುಸ್ಥಿರ ಆಸ್ತಿ ನಿರ್ಮಾಣಕ್ಕೆ ಈ ಯೋಜನೆ ಒತ್ತು ನೀಡಲಿದೆ.

ಇದನ್ನೂ ಓದಿ:

‘ವಿ ಬಿ ಜಿ ರಾಮ್ ಜಿ’ ಯೋಜನೆಯ ಹೊಸ ನಿಯಮಗಳೇನು?

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ, ಹೊಸ ಯೋಜನೆಯು ಕೇವಲ ದೈಹಿಕ ಶ್ರಮದ ಕೆಲಸಗಳಿಗೆ ಸೀಮಿತವಾಗಿಲ್ಲ. ಇದರಲ್ಲಿ ಗ್ರಾಮೀಣ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಜಲ ಸಂರಕ್ಷಣೆ, ಡಿಜಿಟಲ್ ಮೂಲಸೌಕರ್ಯ ನಿರ್ಮಾಣ ಮತ್ತು ಪರಿಸರ ಸ್ನೇಹಿ ಗ್ರಾಮೀಣ ಉದ್ಯೋಗಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹಳೆಯ ಯೋಜನೆಯಲ್ಲಿದ್ದ ಭ್ರಷ್ಟಾಚಾರ ಮತ್ತು ವಿಳಂಬ ನೀತಿಯನ್ನು ತಡೆಯಲು ನೇರ ನಗದು ವರ್ಗಾವಣೆ ವ್ಯವಸ್ಥೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !