ಹೊಸದಿಗಂತ ಡಿಜಿಟಲ್ ಡೆಸ್ಕ್:
ಎವರ್‌ಗ್ರೀನ್ ಗೀತೆಗಳ ಗಾಯಕಿ ಎಸ್. ಜಾನಕಿಯವರಿಗೆ ಯಾವುದೇ ಭಾಷೆಯ ಗಡಿ ಇರಲಿಲ್ಲ. ಎಸ್. ಜಾನಕಿಯವರು ಹಾಡಿದ್ದಾರೆ ಎಂದು ಗೊತ್ತಾದ್ರೆ ಸಾಕು ಯಾವ ಭಾಷೆಯಾದ್ರೂ ಪರವಾಗಿಲ್ಲ ಎಂದು ಹಾಡನ್ನು ಮೆಚ್ಚಿಕೊಳ್ಳುತ್ತಿದ್ದರು.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದೆ, ಸಂಸ್ಕೃತ, ಉರ್ದು, ತುಳು, ಪಂಜಾಬಿ, ಬಂಗಾಳಿ, ಕೊಂಕಣಿ ಇನ್ನೂ ಹಲವು ಭಾಷೆಗಳಲ್ಲಿ ಜಾನಕಮ್ಮ ಹಾಡಿದ್ದಾರೆ. ಇಡೀ ದೇಶದ ಮೂಲೆ ಮೂಲೆಯಲ್ಲೂ, ವಿದೇಶದಲ್ಲಿಯೂ ಇವರಿಗೆ ಅಭಿಮಾನಿಗಳಿದ್ದಾರೆ.
ಕನ್ನಡ ಹಾಗೂ ಇನ್ನಿತರ ಭಾಷೆಗಳಲ್ಲಿ ಹಾಡಿರುವ ಜಾನಕಮ್ಮನನ್ನು ನೂರಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಯಾವೆಲ್ಲಾ? ಇಲ್ಲಿದೆ ಡೀಟೇಲ್ಸ್..
ಅತ್ಯುತ್ತಮ ಗಾಯನಕ್ಕಾಗಿ ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿಗಳು.
ದೇಶದ ವಿವಿಧ ರಾಜ್ಯ ಸರ್ಕಾರಗಳಿಂದ ಬರೋಬ್ಬರಿ 33 ಚಲನಚಿತ್ರ ಪ್ರಶಸ್ತಿಗಳು.
2013ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸಿ ಗೌರವ.
ಕರ್ನಾಟಕ ಸರ್ಕಾರದಿಂದ ಗೌರವಾನ್ವಿತ ‘ರಾಜ್ಯೋತ್ಸವ ಪ್ರಶಸ್ತಿ’ ಹಾಗೂ ತಮಿಳುನಾಡು ಸರ್ಕಾರದಿಂದ ‘ಕಲೈಮಾಮಣಿ ಪ್ರಶಸ್ತಿ’ಗೆ ಪಾತ್ರರಾಗಿದ್ದರು.
ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕಾರ.



