July 17, 2026
Friday, July 17, 2026
spot_img

ಸೋನಂ ವಾಗ್​​ಚುಕ್ ಹೋರಾಟಕ್ಕೆ ಸಾಥ್‌ ನೀಡಿದ ಸೋನಾಕ್ಷಿ ಸಿನ್ಹಾ, ಸಮಯ್‌ ರೈನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾಜಿಕ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬಾಲಿವುಡ್‌ ಸಾಥ್‌ ನೀಡಿದೆ. ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ, ಕಮಿಡಿಯನ್‌ ಸಮಯ್‌ ರೈನಾ ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಸೋನಾಕ್ಷಿ ಸಿನ್ಹಾ ಅವರು ಸಹ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸಾಮಾನ್ಯವಾಗಿ ತಾವು ಇಂತಹ ವಿಷಯಗಳ ಬಗ್ಗೆ ಹೇಳಿಕೆಗಳನ್ನು ನೀಡದಿದ್ದರೂ, ಈಗ ಮೌನವಾಗಿರುವುದು ತಮಗೆ ಕಷ್ಟವಾಗಿದೆ ಎಂದು ಹೇಳಿದ್ದಾರೆ. ಸೋನಮ್ ವಾಂಗ್‌ಚುಕ್ ನಮಗೆಲ್ಲರಿಗೂ ಪರಿಚಿತರು. ನಮ್ಮ ದೇಶಕ್ಕಾಗಿ ಅವರು ಏನು ಮಾಡಿದ್ದಾರೆ, ಅವರ ಸಾಧನೆಗಳೇನು ಮತ್ತು ಅವರು ಎಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇಂದು ಅವರು 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರು ಏನನ್ನೂ ಸೇವಿಸಿಲ್ಲ. ಅವರು ಇದನ್ನು ಏಕೆ ಮಾಡುತ್ತಿದ್ದಾರೆ? ಅವರು ಮಕ್ಕಳ ಭವಿಷ್ಯಕ್ಕಾಗಿ ಅಲ್ಲಿ ಕುಳಿತಿದ್ದಾರೆ, ಆ ಭವಿಷ್ಯವು ವಿನಾಶದತ್ತ ಸಾಗುತ್ತಿದೆ ಎಂದು ಅವರು ನಂಬಿದ್ದಾರೆ. ತಮ್ಮ ಜೀವ ಕಳೆದುಕೊಂಡ ಮಕ್ಕಳಿಗಾಗಿ ಅವರು ಹೋರಾಡುತ್ತಿದ್ದಾರೆ. ಸರಿಯಾಗಿ ಕೆಲಸ ಮಾಡದ ವ್ಯವಸ್ಥೆಯ ವಿರುದ್ಧ ಅವರು ನಿಂತಿದ್ದಾರೆ’ ಎಂದು ಹೇಳಿದ್ದಾರೆ.

ಕಮಿಡಿಯನ್ ಸಮಯ್ ರೈನಾ ಸಹ ಇನ್‌ಸ್ಟಾಗ್ರಾಮ್‌ನಲ್ಲಿ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹದ ಫೋಟೋವನ್ನು ಹಂಚಿಕೊಂಡು, ಅವರು ಸುರಕ್ಷಿತವಾಗಿರಲಿ ಮತ್ತು ಈ ವಿಷಯವು ಸಂವಾದದ ಮೂಲಕ ಶೀಘ್ರವೇ ಮುಕ್ತಾಯಗೊಳ್ಳಲಿ ಎಂದು ಹಾರೈಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !