July 21, 2026
Tuesday, July 21, 2026
spot_img

ಪೀಕ್ ಅವರ್‌ನಲ್ಲಿ ಮತ್ತೆ ಕೈ ಕೊಟ್ಟ ಮೆಟ್ರೋ: ಕೆಲಕಾಲ ಸಂಚಾರ ಅಸ್ತವ್ಯಸ್ತ, ಪ್ರಯಾಣಿಕರ ಪರದಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸೋಮವಾರ ಬೆಳಗ್ಗೆ ತಾಂತ್ರಿಕ ದೋಷ ಉಂಟಾದ ಪರಿಣಾಮ ಕೆಲಕಾಲ ರೈಲು ಸಂಚಾರ ವ್ಯತ್ಯಯಗೊಂಡು ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.

ವಿದ್ಯುತ್ ಸಮಸ್ಯೆಯಿಂದ ಸೇವೆ ಸ್ಥಗಿತ

ಬೆಳಿಗ್ಗೆ ಸುಮಾರು 8 ಗಂಟೆ ವೇಳೆಗೆ ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ ಹಸಿರು ಮಾರ್ಗದ ಕೆಲ ಭಾಗಗಳಲ್ಲಿ ರೈಲು ಸಂಚಾರಕ್ಕೆ ಅಡಚಣೆ ಉಂಟಾಯಿತು. ಆರಂಭದಲ್ಲಿ ಕೆಲವು ನಿಲ್ದಾಣಗಳ ನಡುವೆ ಮಾತ್ರ ರೈಲುಗಳು ಸಂಚರಿಸಿದರೆ, ವಿಸ್ತರಿತ ಮಾರ್ಗದಲ್ಲಿ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ಪ್ರಯಾಣಿಕರಿಗೆ ತೀವ್ರ ತೊಂದರೆ

ಕಚೇರಿ, ಕಾಲೇಜು ಹಾಗೂ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಕಾಯುವ ಪರಿಸ್ಥಿತಿ ಎದುರಿಸಿದರು. ಬೆಳಗಿನ ಗರಿಷ್ಠ ಸಂಚಾರ ಸಮಯದಲ್ಲೇ ಸಮಸ್ಯೆ ಎದುರಾದ ಕಾರಣ ಜನರು ಪರ್ಯಾಯ ಸಾರಿಗೆ ವ್ಯವಸ್ಥೆಯ ಮೊರೆ ಹೋಗಬೇಕಾಯಿತು.

ಇದನ್ನೂ ಓದಿ:

ತಾಂತ್ರಿಕ ತಂಡಗಳು ತಕ್ಷಣವೇ ದೋಷ ಪತ್ತೆಹಚ್ಚಿ ದುರಸ್ತಿ ಕಾರ್ಯ ಕೈಗೊಂಡವು. ಸೇವೆಯಲ್ಲಿ ಉಂಟಾದ ತೊಂದರೆಗೆ ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿ, ಸಾಧ್ಯವಾದಷ್ಟು ಬೇಗ ಸಂಚಾರವನ್ನು ಸಾಮಾನ್ಯ ಸ್ಥಿತಿಗೆ ತರಲು ಕ್ರಮ ಕೈಗೊಂಡರು.

ಸಂಚಾರ ಮತ್ತೆ ಸಹಜ

ಸುಮಾರು 8.45ರ ವೇಳೆಗೆ ತಾಂತ್ರಿಕ ದೋಷ ನಿವಾರಣೆಯಾದ ಬಳಿಕ ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಗೆ ಮರಳಿದ್ದು, ಪ್ರಯಾಣಿಕರ ಸೇವೆ ಪುನಃ ಆರಂಭಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !